ನ್ಯೂಝಿಲ್ಯಾಂಡ್: ಭಾರತೀಯ ಮೂಲದ ವ್ಯಕ್ತಿಯ ಮೇಲೆ ಬೇಸ್ ಬಾಲ್ ಬ್ಯಾಟ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

Update: 2017-08-16 15:22 GMT

ಹೊಸದಿಲ್ಲಿ, ಆ.16: ಭಾರತೀಯ ಮೂಲದವ ಎನ್ನಲಾದ 25 ವರ್ಷದ ಯುವಕನ ಮೇಲೆ ದುಷ್ಕರ್ಮಿಗಳು ಬೇಸ್ ಬಾಲ್ ಬ್ಯಾಟ್ ನಿಂದ ದಾಳಿ ನಡೆಸಿದ ಘಟನೆ ನ್ಯೂಝಿಲ್ಯಾಂಡ್ ನಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಆಕ ಲ್ಯಾಂಡ್ ನ ಟಕಾನಿನಿಯ ರಸ್ತೆ ಬದಿಯಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಫುಟ್ಪಾತ್ ನಲ್ಲಿ ಬಿದ್ದು ಅವರು ನರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಆಕ್ ಲ್ಯಾಂಡ್ ಆಸ್ಪತ್ರೆಯಲ್ಲಿ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದು, ಆ ವ್ಯಕ್ತಿಯ ಗುರುತು ಪತ್ತೆಹಚ್ಚಲು ನಾವು ಸ್ಥಳೀಯರ ನೆರವನ್ನು ಕೋರಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News