ಮಿಲಾಗ್ರಿಸ್ ಕಾಲೇಜಿನ ಎನ್ನೆಸ್ಸೆಸ್ ಘಟಕ: ಸ್ವಾತಂತ್ರ್ಯ ದಿನಾಚರಣೆ
Update: 2017-08-16 21:04 IST
ಉಡುಪಿ, ಆ.16: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾಲೇಜು ಆವರಣದಿಂದ ಸಂತೆಕಟ್ಟೆಯ ವೌಂಟ್ ರೋಸರಿ ಚರ್ಚವರೆಗೆ ಸ್ವಚ್ಛತಾ ಅರಿವು ಬಗ್ಗೆ ಜಾಥಾ ಮತ್ತು ಶ್ರಮದಾನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವಾ ಜಾಥಾವನ್ನು ಉದ್ಘಾಟಿಸಿ ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ರವಿನಂದನ್ ಹಾಗೂ ಅನುಪಮಾ ಕಾರ್ಯಕ್ರಮ ನಡೆಸಿಕೊಟ್ಟರು.