ಪಿಎಫ್‌ಐ ಉಡುಪಿ ವಿಭಾಗ: ಸ್ವಾತಂತ್ರೋತ್ಸವ

Update: 2017-08-16 15:37 GMT

ಉಡುಪಿ, ಆ.16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ವಿಭಾಗದ ವತಿಯಿಂದ 71ನೆ ಸ್ವಾತಂತ್ರೋತ್ಸವವನ್ನು ಉಡುಪಿ ಜಾಮೀಯ ಮಸೀದಿಯ ಬಳಿ ಆಚರಿಸಲಾಯಿತು.

ಪಿಎಫ್‌ಐ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಾಮೀಯ ಮಸೀದಿಯ ವೌಲಾನ ರಶೀದ್ ಅಹ್ಮದ್ ಉಮ್ರಿ, ಇಂದ್ರಾಳಿ ನೂರಾನಿ ಮದೀಸಿಯ ವೌಲಾನ ಮಸೀವುಲ್ಲಾ ಖಾನ್ ಕಾಸಿಮಿ ಮಾತನಾಡಿದರು.
ಅಧ್ಯಕ್ಷತೆಯನ್ನು ಪಿಎಫ್‌ಐ ಉಡುಪಿ ವಿಭಾಗದ ಅಧ್ಯಕ್ಷ ಮುಹಮ್ಮದ್ ಅಝರುದ್ದೀನ್ ವಹಿಸಿದ್ದರು. ಎಸ್‌ಡಿಪಿಐ ಮುಖಂಡ ನಝೀರ್ ಉಡುಪಿ ಉಪಸ್ಥಿತರಿದ್ದರು. ಮುಹಮ್ಮದ್ ಶಫೀಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News