ಉಡುಪಿ: ಆಧಾರ್ ಜೋಡಣೆಗೆ ವಕ್ಫ್ ಮಂಡಳಿ ಸೂಚನೆ

Update: 2017-08-16 16:03 GMT

ಉಡುಪಿ, ಆ.16: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ವಕ್ಫ್ ಮಂಡಳಿಯ ಮೂಲಕ ಗೌರವಧನ ಪಡೆಯುತ್ತಿರುವ ಜಿಲ್ಲೆಯ ವಕ್ಫ್ ನೊಂದಾಯಿತ ಮಸೀದಿ ಗಳ ಪೇಶ್ ಇಮಾಮರು ಹಾಗೂ ಮುಅಧಿನ್‌ಗಳು ತಮ್ಮ ಬ್ಯಾಂಕ್ ಖಾತೆ ಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿ ನೊಂದಾವಣಿ ಮಾಡಿದ ಪಾಸ್‌ಬುಕ್ ನಕಲಿಯನ್ನು ದ್ವಿಪ್ರತಿಯಲ್ಲಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿರುವ ವಕ್ಫ್ ಸಂಸ್ಥೆಗಳ ಆಸ್ತಿಗಳಿಗೆ ಖಾಲಿ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಸಂರಕ್ಷಣಾಧಿಕಾರಿಯವರಿಂದ ಸಸಿಗಳನ್ನು ಪಡೆದುಕೊಂಡು ನೆಡಬೇಕು ಮತ್ತು ವಕ್ಫ್ ಸೊತ್ತುಗಳ ಮುಂದೆ ನಾಮ ಫಲಕ ಗಳನ್ನು ಅಳವಡಿಸಬೇಕು. ಜಿಲ್ಲೆಯ ಎಲ್ಲ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಗಳು ಕಾರ್ಯಪ್ರವೃತ್ತರಾಗಿ ಈ ತಿಂಗಳ ಅಂತ್ಯದಲ್ಲಿ ಪೂರ್ಣಗೊಳಿಸಲು ಹಾಗೂ ಕ್ರಮಕೈಗೊಂಡ ಬಗ್ಗೆ ಕಚೇರಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾ ವಕ್ಫ್ ಕಚೇರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News