ವಿಕಾಸ್ ಕಾಲೇಜಿನಲ್ಲಿ ‘ಪಾಂಚ್ ಸೌ ಕಾ ಜೋಶ್’ ಕಾರ್ಯಕ್ರಮ

Update: 2017-08-16 16:37 GMT

ಮಂಗಳೂರು, ಆ.16: ನಗರದ ವಿಕಾಸ್ ಕಾಲೇಜಿನಲ್ಲಿ ಬುಧವಾರ ನಡೆದ ‘ಪಾಂಚ್ ಸೌ ಕಾ ಜೋಶ್’ ಸ್ಪರ್ಧಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಹೆಚ್ಚುವರಿ ಎಸ್ಪಿ ಡಾ. ವೇದಮೂರ್ತಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಾರತ ಶ್ರೀಮಂತ ರಾಷ್ಟ್ರವಾಗಿದ್ದು, ಮುಂದಿನ 10 ವರ್ಷದಲ್ಲಿ ಭಾರತ ಮತ್ತಷ್ಟು ಶ್ರೀಮಂತ ರಾಷ್ಟ್ರವಾಗಲಿದೆ. 500 ರೂ.ನಲ್ಲಿ ವಿಕಾಸ್ ಕಾಲೇಜ್ ಇಂತಹ ವಿಶೇಷ ಸ್ಪರ್ಧಾ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯ ಎಂದರು.

 ವೇದಿಕೆಯಲ್ಲಿ ‘ಕಾಸ್ ಎಜು ಸೊಲ್ಯುಷನ್’ನ ನಿರ್ದೇಶಕ ಡಾ. ಅನಂತ್‌ಪ್ರಭು ಜಿ., ಸಂಚಾಲಕ ಡಾ. ಡಿ. ಶ್ರೀಪತಿ ರಾವ್, ಪ್ರಾಂಶುಪಾಲ ಟಿ.ರಾಜಾರಾಮ್ ರಾವ್, ಕಾಸ್ ವಿದ್ಯಾಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಕಾಸ್ ಎಜುಕೇಷನ್ ಟ್ರಸ್ಟ್ ನ ಟ್ರಸ್ಟಿ ಜೆ. ಕೊರಗಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಐಶ್ವರ್ಯಾ ರಾವ್ ‘ಪಾಂಚ್ ಸೌ ಕಾ ಜೋಶ್’ ಸ್ಪರ್ಧೆಯ ಉದ್ದೇಶದ ಬಗ್ಗೆ ವಿವರಿಸಿದರು.

ಅತ್ಯುತ್ತಮ ವ್ಯವಹಾರದ ಮಾದರಿಯ ವಿಭಾಗದಲ್ಲಿ ಟಿ.ಎ.ಪೈ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ನಿಶಾನ್, ಅಶ್ವಿನ್, ಸೌರಭ್, ಅತ್ಯುತ್ತಮ ಶೋಧನಾ ಮಾದರಿಯಲ್ಲಿ ಕೆನರಾ ಬಾಲಕಿಯರ ಹೈಸ್ಕೂಲ್‌ನ ಅನನ್ಯಾ ಪಿ., ಖುಪಿ., ರಶ್ಮಿತಾ ಎಸ್. ಶೇಟ್, ಸೌಂದರ್ಯಗುಣ ಗ್ರಾಹಕತೆಯುಳ್ಳ ಚುರುಕು ಮಾದರಿಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮಮ ಹೈಸ್ಕೂಲ್‌ನ ಪ್ರೀತಮ್ ಎಸ್.,ಇಮಾದ್, ಸುಷ್ಮಾ, ತಲಾ 10 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು.

ಪ್ರೋತ್ಸಾಹಕ ಬಹುಮಾನ 2ಸಾವಿರ ರೂ.ವನ್ನು ಕೆನರಾ ಬಾಲಕಿಯರ ಹೈಸ್ಕೂಲ್‌ನ ಶ್ರೇಯಾ ಮಲ್ಯ,ಅನನ್ಯಾ, ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ರಾನ್‌ಸನ್,ಭುವನ್, ಜ್ಯೋತಿರಾದಿತ್ಯ, ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ಮ ಸ್ನೇಹಾ ಅಲೆಕ್ಸ್, ನವ್ಯಾ ಭಂಡಾರಿ ಬಹುಮಾನ ಪಡೆದುಕೊಂಡರು.
 ಸ್ಪರ್ಧೆಯಲ್ಲಿ ದ.ಕ., ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ 51 ತಂಡಗಳು ಭಾಗವಹಿಸಿತ್ತು. ಉಪನ್ಯಾಸಕ ಅಜಯ್ ಕರ್ಕೇರಾ ಸ್ವಾಗತಿಸಿದರು. ಆಡಳಿತಾಧಿಕಾರಿ ವಿದ್ಯಾ ಕಾಮತ್ ವಂದಿಸಿದರು. ಕಾರ್ತಿಕ್ ಉಪ್ಪರ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News