ಆ. 17ರಿಂದ ಯೋಗ, ಪ್ರಕೃತಿ ಉಚಿತ ಚಿಕಿತ್ಸಾ ಶಿಬಿರ

Update: 2017-08-16 17:22 GMT

ಮೂಡುಬಿದಿರೆ, ಆ. 16: ಆಳ್ವಾಸ್ ಆನಂದಮಯ ಆರೋಗ್ಯಧಾಮದ ಆಶ್ರಯದಲ್ಲಿ ಆ. 17ರಿಂದ 23ರವರೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವು ತೋಡಾರು ಬಂಗಬೆಟ್ಟುವಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ 9  ರಿಂದ ಮಧ್ಯಾಹ್ನ 1  ಗಂಟೆಯವರೆಗೆ ನಡೆಯಲಿದೆ. 

ಎಣ್ಣೆ ಮಾಲೀಶು ಚಿಕಿತ್ಸೆ, ಪಥ್ಯಾಹಾರದ ಬಗ್ಗೆ ಸಲಹೆ, ಸೂಜಿ ಚಿಕಿತ್ಸೆ , ಆಕ್ಯುಪ್ರೆಶರ್, ಯೋಗ ಮಾಹಿತಿ ಮತ್ತು ತರಬೇತಿ ಸೌಲಭ್ಯಗಳನ್ನು ಶಿಬಿರ ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಶಿಬಿರದಲ್ಲಿ ಪಾಲ್ಗೊಳ್ಳಲು ಮುಂಚಿತವಾಗಿ ಹೆಸರು ನೋಂದಾಯಿಸಲು 8105934133, 08258-262735 ದೂರವಾಣಿ ಸಂಖ್ಯೆಯ ಮುಖಾಂತರ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News