×
Ad

ಕೊಣಾಜೆ: ಅಲ್ಲಲ್ಲಿ ಸ್ವಾತಂತ್ರ್ಯೋತ್ಸವ

Update: 2017-08-16 23:02 IST

ನರಿಂಗಾನ ಯುವಕ ಮಂಡಲ ತೌಡುಗೋಳಿ
ನಿವೃತ್ತ ಪೊಲೀಸ್ ಅಕಾರಿ ವೆಂಕಪ್ಪ ಬೆರ್ಮದೆ ಧ್ವಜಾರೋಹಣಗೈದರು. ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಿ. ನಾರಾಯಣ ಶೆಟ್ಟಿ, ಡಾ. ಜಯರಾಮ ಮುದ್ಯ, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೋಸೆಫ್ ಕುಟ್ಟಿನ್ಹ, ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು, ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ ಗರೋಡಿ, ಮಾಜಿ ಅಧ್ಯಕ್ಷ ನವೀನ್ ಶೆಟ್ಟಿ ಮಂಗಲ್ಪಾಡಿ, ವಿನೋದ್ ಸುವರ್ಣ ನಿಡ್ಮಾಡ್, ಗೌರವಾಧ್ಯಕ್ಷ ಉದಯ ಶಂಕರ್ ಶೆಟ್ಟಿ ಬಲೆತ್ತೋಡು, ಪಂಚಾಯಿತಿ ಸದಸ್ಯೆ ಹರಿಣಾಕ್ಷಿ , ಜ್ಯೋತಿ ಹಾಗೂ ಬೇಬಿ ಉಪಸ್ಥಿತರಿದ್ದರು.
 
ಕೈರಂಗಳ ಹಿರಿಯ ಪ್ರಾಥಮಿಕ ಶಾಲೆ
 ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ ಧ್ವಜಾರೊಹಣಗೈದರು. ಜಯಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೊಲ್ಲರಮಜಲು ಶಂಕರ್ ಭಟ್, ಕಾರ್ಯದರ್ಶಿ ರಾಜಾರಾಮ್ ಭಟ್ ದೋಸೆಮನೆ, ಮುಖ್ಯಶಿಕ್ಷಕ ಶಿವರಾಮ ಭಟ್ ಉಪಸ್ಥಿತರಿದ್ದರು.
 
 ಅಂಬರ್ ವ್ಯಾಲ್ಯೂ ವಿದ್ಯಾಸಂಸ್ಥೆ

ವಿದ್ಯಾನಗರ ಕೈರಂಗಳ ಶಾಲಾ ಸಂಚಾಲಕ ಅಬ್ದುಲ್ ರಹಿಮಾನ್ ಧ್ವಜಾರೋಹಣಗೈದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷ ಆಲಿಕುಂಞ ಮೋಂಟುಗೋಳಿ ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರ ಮೋಂಟುಗೋಳಿ
 ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ ಧ್ವಜಾರೋಹಣಗೈದರು. ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಂದರಾಜ ಶೆಟ್ಟಿ ಪಿಜಿನಬೈಲು, ಗೋಪಾಲ ಬಂಗೇರ ಮೋಂಟುಗೋಳಿ, ಅಜೇಯ ಫ್ರಂಡ್ಸ್ ಸರ್ಕಲ್‌ನ ಅಧ್ಯಕ್ಷ ಅಬ್ಬಾಸ್ ಉಪಸ್ಥಿತರಿದ್ದರು.

ತೋಟಾಲ್ ಜುಮಾ ಮಸೀದಿ
  ಜಮಾಅತ್‌ನ ಅಧ್ಯಕ್ಷ ಇಸ್ಮಾಯಿಲ್ ಪಿ.ಎಸ್. ಧ್ವಜಾರೋಹಣಗೈದರು. ಖತೀಬ ಮೊಹಿಯುದ್ದಿನ್ ದುಆ ನೇರವೇರಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಸಂಸ್ಥೆಯ ಕಾರ್ಯದರ್ಶಿ ಖಲೀಲ್ ಡಿ.ಎಸ್, ಜೊತೆ ಕಾರ್ಯದರ್ಶಿ ಶರೀಫ್ ಎನ್.ಎಸ್, ಜಮಾಅತಿನ ಪದಾಕಾರಿಗಳಾದ ಪಿ.ಎಚ್. ಇಬ್ರಾಹಿಂ, ಮೂಸಕುಂಞ , ಅಹ್ಮದ್ ಕುಂಞ ಪಿ.ಕೆ, ಮೀದ್ ಮುಸ್ಲಿಯಾರ್, ಮಹಮ್ಮದ್ ತೋಟಾಲ್ ಉಪಸ್ಥಿತರಿದ್ದರು.

ಅಲ್ ಅಮೀನ್ ಫ್ರೆಂಡ್ಸ್ ಕೈರಂಗಳ
ಗೌರವಾಧ್ಯಕ್ಷ ಅಹ್ಮದ್ ಕುಂಞ ಧ್ವಜಾರೋಹಣಗೈದರು. ತೋಟಾಲ್ ಮಸೀದಿಯ ಖತೀಬ ಮೊಹೊಯ್ಯಿದ್ದಿನ್, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಪಂಚಾಯಿತಿ ಸದಸ್ಯ ಲೋಹಿತ್ ಗಟ್ಟಿ, ಜನಾರ್ದನ ಕುಲಾಲ್, ಸಂಸ್ಥೆಯ ಅಧ್ಯಕ್ಷ ಶರೀಫ್ ಕೈರಂಗಳ ಹಾಗೂ ಶ್ರೀಕೃಷ್ಣ ಗೇಮ್ಸ್ ಕ್ಲಬ್‌ನ ಅಧ್ಯಕ್ಷ ವಿಶ್ವನಾಥ ಉಪಸ್ಥಿತರಿದ್ದರು.

ಶ್ರೀಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ
  ಸಂಸ್ಥೆಯ ಆಧ್ಯಕ್ಷ ವಿಶ್ವನಾಥ ಧ್ವಜಾರೋಹಣಗೈದರು. ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಪಂಚಾಯಿತಿ ಸದಸ್ಯರಾದ ಜನಾರ್ದನ ಕುಲಾಲ್, ಲೋಹಿತ್ ಗಟ್ಟಿ, ಸಂಸ್ಥೆಯ ಮಾಜಿ ಅಧ್ಯಕ್ಷ ಸೂರ್ಯನಾರಾಯಣ ಭಟ್, ಹರೀಶ್ ಆಳ್ವ, ಸತ್ತಾರ್ ಕೈರಂಗಳ, ಜಗದೀಶ್ ಚಂದಳ, ಮೋಹನ್ ಡಿ.ಜಿ.ಕಟ್ಟೆ, ಖಲೀಲ್ ಡಿ.ಎಸ್, ುನ್ಸೂರ್ ಸುಟ್ಟ ಉಪಸ್ಥಿತರಿದ್ದರು.

ಕಲ್ಲರಕೋಡಿ ಹಿ.ಪ್ರಾ. ಶಾಲೆ
 ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ ಧ್ವಜಾರೋಹಣಗೈದರು. ಪಂಚಾಯಿತಿ ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರಾದ ಅಬ್ದುಲ್ ಖಾದರ್, ಪ್ರೇಮಾನಂದ ರೈ ನೆತ್ತಿಲಕೋಡಿ, ಮಾಜಿ ಸದಸ್ಯ ನವಾರ್ ಹಾಗೂ ಸ್ಥಳೀಯರು ಉಸ್ಥಿತರಿದ್ದರು.

ನರಿಂಗಾನ ಗ್ರಾಮ ಪಂಚಾಯತ್
 ನರಿಂಗಾನ ಗ್ರಾಮ ಪಂ. ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ ಧ್ವಜಾರೋಹಣಗೈದರು. ಪಂಚಾಯಿತಿ ಅಭಿವೃದ್ಧಿ ಅಕಾರಿ ರಂಜಿನಿ, ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರಾದ ಜ್ಯೋತಿ, ಹರಿಣಾಕ್ಷಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News