ಕಣ್ಣೂರಿನಲ್ಲಿ ಬ್ಲೂವೇಲ್ ಚಾಲೆಂಜ್ ಗೇಮ್‌ಗೆ ಬಾಲಕ ಬಲಿ
ಕಣ್ಣೂರು, ಆ. 16: ತಿರುವನಂತಪುರದಲ್ಲಿ ನಿನ್ನೆ ಬ್ಲೂಗೇಮ್ ಚಾಲೆಂಜ್‌ಗೆ ಬಾಲಕನೋರ್ವ ಬಲಿಯಾಗಿದ್ದಾನೆ ಎಂದು ವರದಿಯಾದ ಒಂದು ದಿನದ ಬಳಿಕ, ಈಗ ಬ್ಲೂವೇಲ್ ಚಾಲೆಂಜ್ ಗೇಮ್‌ಗೆ ಕೇರಳದಲ್ಲಿ ಇನ್ನಷ್ಟು ಬಾಲಕರು ಬಲಿಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಕಣ್ಣೂರಿನಲ್ಲಿ ಕಳೆದ ಮೇ ಅಂತ್ಯದಲ್ಲಿ ಐಟಿಐ ವಿದ್ಯಾರ್ಥಿ ಸಾವಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವಂತ್ ಈ ಅಪಾಯಕಾರಿ ಬ್ಲೂವೇಲ್ ಚಾಲೆಂಜ್‌ನ ಗೀಳಿಗೆ ಬಲಿಯಾಗಿದ್ದ ಎಂದು ಆತನ ತಾಯಿ ತಿಳಿಸಿದ್ದಾರೆ. ತೋಳು ಹಾಗೂ ಎದೆಗೆ ಗಾಯ ಮಾಡಿಕೊಂಡಿರುವ ಸಾವಂತ್‌ನ ಭಾವಾಚಿತ್ರವನ್ನು ಅವರ ಕುಟುಂಬ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದೆ.
ಸಾವಂತ್ ರಾತ್ರಿ ಮೊಬೈಲ್‌ನಲ್ಲಿ ಈ ಆಟ ಆಡುತ್ತಿದ್ದ. ರಾತ್ರಿ ಒಬ್ಬನೇ ಹೊರಗೆ ಹೋಗುತ್ತಿದ್ದ. ಸಾವಂತ್‌ನ ಅಸ್ವಾಭಾವಿಕ ನಡತೆ ನೋಡಿ ಕುಟುಂಬದವರು ಆತನಿಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ.
ತಿರುವನಂತಪುರದ ನಿವಾಸಿಯಾಗಿದ್ದ ಬಾಲಕ ಮನೋಜ್ ಸಾವು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಸಾವಂತ್‌ನ ಕುಟುಂಬ ತಮಗಾದ ಆಘಾತಕಾರಿ ಅನುಭವ ಹೇಳಲು ಮಾಧ್ಯಮದ ಮುಂದೆ ಬಂದಿದ್ದಾರೆ.