ಬೆಳ್ತಂಗಡಿ: ಅಪರಿಚಿತ ಪುರುಷನ ಮೃತದೇಹ ಪತ್ತೆ
Update: 2017-08-16 23:49 IST
ಬೆಳ್ತಂಗಡಿ, ಆ. 16: ಮುಂಡಾಜೆ ಸಮೀಪ ಅರಣ್ಯ ಇಲಾಖೆಯ ನರ್ಸರಿಗೆ ತಾಗಿಕೊಂಡಿರುವ ಕಿಂಡಿ ಅಣೆಕಟ್ಟಿನಲ್ಲಿ ಅಪರಿಚಿತ ಪುರುಷನ ಮೃತದೇಹವೊಂದು ಬುಧವಾರ ಪತ್ತೆಯಾಗಿದೆ.
ಕಿಂಡಿ ಅಣೆಕಟ್ಟಿನ ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಸುಮಾರು 50 ರಿಂದ 60 ವರ್ಷ ಪ್ರಾಯವಿರಬಹುದೆಂದು ಅಂದಾಜಿಸಲಾಗಿದೆ.
ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.