×
Ad

ಮಳೆ ಹನಿ ಪುಸ್ತಕ ಬಿಡುಗಡೆ

Update: 2017-08-17 16:09 IST

ಮಂಗಳೂರು, ಆ.17: ಅಕ್ಷರ ಇ-ಮ್ಯಾಗಝಿನ್ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಯೀಲ್ ಅವರ ‘ಮಳೆ ಹನಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆಯಿತು.

ಶಾಸಕ ಮೊಯ್ದಿನ್ ಬಾವಾ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್., ಎಂ. ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್, ಕಲಾವಿದ ದಿನೇಶ್ ಹೊಳ್ಳ, ಡಿ.ಐ. ಅಬೂಬಕರ್ ಕೈರಂಗಳ, ಫೈನ್ ಗೋಲ್ಡ್‌ನ ಡಿ.ಎಂ.ರಶೀದ್, ಕವಿ ಯಂಶ ಬೇಂಗಿಲ, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಸಾಮಾಜಿಕ ಕ್ಷೇತ್ರದ ಸಾಧನೆಗೆ ಹನೀಫ್ ಹಾಜಿ ಗೋಳ್ತಮಜಲು ಹಾಗೂ ಕಲಾಕ್ಷೇತ್ರದ ಸಾಧನೆಗೆ ತಾರಾನಾಥ್ ಕೈರಂಗಳ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಕವಿಗೋಷ್ಠಿ ಮತ್ತು ವ್ಯಕ್ತಿತ್ವ ವಿಕಸನ ತರಗತಿ ನಡೆಯಿತು. ಅಕ್ಷರ ಪತ್ರಿಕೆಯ ಉಪ ಸಂಪಾದಕ ಎಂ.ಎಂ. ಮಹ್‌ರೂಫ್ ಆತೂರು ಕಾರ್ಯಕ್ರಮ ನಿರೂಪಿಸಿದರು. ಕಬೀರ್ ಮಾಸ್ಟರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News