×
Ad

ಸೊರಬ : ಬೀಳ್ಕೊಡುಗೆ ಸಮಾರಂಭ

Update: 2017-08-17 16:56 IST

ಸೊರಬ,ಆ.17 : ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ, ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಅಧಿಕಾರಿ ನಿರ್ವಹಿಸಿದ ಕೆಲಸ ಸ್ಥಳೀಯರಲ್ಲಿ ಶಾಶ್ವತವಾಗಿ ಉಳಿಯುವಂತಾದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ಜಿ.ಪಂ. ಉಪಕಾರ್ಯದರ್ಶಿ ರಂಗಸ್ವಾಮಿ ತಿಳಿಸಿದರು.

ಪಟ್ಟಣದ ರಂಗಮಂದಿರದಲ್ಲಿ ವರ್ಗಾವಣೆಗೊಂಡ ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಡಿ. ಇಸ್ಮಾಯಿಲ್‍ರವರಿಗೆ ತಾಲೂಕು ಗ್ರಾ.ಪಂ ಅಭಿವೃಧಿ ಅಧಿಕಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾಲ್ಲೂಕು ಮಟ್ಟದ ಅಧಿಕಾರಿಗಳು ಹಲವು ಒತ್ತ್ತಡಗಳ ನಡುವೆ ಕಾರ್ಯನಿರ್ವಹಿಸಬೇಕಾಗಿದೆ. ಇದಲ್ಲದೇ ಸರ್ಕಾರದ ವಿವಿಧ ಯೋಜನೆಗಳನ್ನುಅನುಷ್ಠಾನಗೊಳಿಸುವುದು, ಸಮರ್ಪಕ ನಿರ್ವಹಣೆ, ಸಿಬ್ಬಂಧಿಗಳ ಸಹಕಾರದೊಂದಿಗೆ ಕಾರ್ಯರೂಪಗೊಳಿಸಿದಾಗ ಜನತೆಗೆ ತಲುಪುತ್ತದೆ. ಈ ನಿಟ್ಟಿನಲ್ಲಿ ಎಸ್.ಎಂ.ಡಿ.ಇಸ್ಮಾಯಿಲ್‍ರವರು ಉತ್ತಮ ಕಾರ್ಯನಿರ್ವಹಿಸುವ ಮೂಲಕ ತಾಲ್ಲೂಕಿನ ಜನತೆಯ ಮನದಲ್ಲಿ ಉಳಿದಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಎಸ್.ಎಂ.ಡಿ. ಇಸ್ಮಾಯಿಲ್ ಮಾತನಾಡಿ, ನಾನು ಸೊರಬಕ್ಕೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ, ಇಲ್ಲಿ ಸರ್ಕಾರದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳದೇ ಹಿಂದುಳಿತ್ತು. ಕಳೆದ ಎರಡು ವರ್ಷಗಳ ಬರಗಾಲದಲ್ಲೂ ಗ್ರಾಮೀಣದ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಸಿಬ್ಬಂಧಿಗಳ ಸಹಕಾರದಿಂದ ಕಾರ್ಯನಿರ್ವಹಿಸಿದ ಆತ್ಮ ತೃಪ್ತಿ ನನಗೆ ಇದೆ. ತಾಲ್ಲೂಕನ್ನು ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕನ್ನಾಗಿ ಮಾಡುವ ಜೊತೆಗೆ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ತ್ವರಿತ ಗತಿಯಲ್ಲಿ ಕಾರ್ಯಗತಗೊಳಿಸಿ, ರಾಜ್ಯದಲ್ಲಿಯೇ ಸೊರಬವನ್ನು ಗುರುತಿಸುವಂತೆ ಮಾಡಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಪಿಡಿಓ ಸಂಘದ ತಾಲ್ಲೂಕು ಅಧ್ಯಕ್ಷ ನೀಲಪ್ಪ ಭೂತಣ್ಣನವರ್, ಉಪಾಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ಹೋಮೇಶ್, ಕೃಷಿ ಅಧಿಕಾರಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ರವಿ ಕುಮಾರ್, ತೋಟಗಾರಿಕಾ ಇಲಾಖೆಯ ಸೋಮಶೇಖರ್, ಕಸಾಪ ಅಧ್ಯಕ್ಷ ಹಾಲೇಶ್ ನವುಲೆ, ಶ್ರೀರಾಮ್, ನಾಗರಾಜ, ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News