×
Ad

ಬೆಳ್ತಂಗಡಿ: ಜಂಇಯತುಲ್ ಮುಅಲ್ಲಿಮೀನ್‌ ವಾರ್ಷಿಕ ಸಭೆ; ಪದಾಧಿಕಾರಿಗಳ ಆಯ್ಕೆ

Update: 2017-08-17 17:22 IST
ಮುಹಮ್ಮದ್ ಅಶ್ರಫ್ ಫೈಝಿ ಪುಂಜಾಲಕಟ್ಟೆ

ಬೆಳ್ತಂಗಡಿ, ಆ.17: ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ತಂಗಡಿ ರೇಂಜ್ ಜಂಇಯತುಲ್ ಮುಅಲ್ಲಿಮೀನ್‌ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಕ್ಕಿಂಜೆಯ ನೂರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.

ವಿದ್ಯಾಭ್ಯಾಸ ಮಂಡಳಿಯ ಮದ್ರಸ ತಪಾಸಣಾಧಿಕಾರಿ ಹನೀಫ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕಕ್ಕಿಂಜೆ ಮದ್ರಸ ಮುದರ್ರಿಸ್ ಮೂಸ ದಾರಿಮಿ ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಫೈಝಿ ಪುಂಜಾಲಕಟ್ಟೆ, ಪ್ರಧಾನ ಕಾರ್ಯದರ್ಶಿ ಯಾಗಿ ಶಂಸುದ್ದೀನ್ ದಾರಿಮಿ ಶಿರ್ಲಾಲು, ಕೋಶಾಧಿಕಾರಿಯಾಗಿ ದಾವೂದ್ ಕಕ್ಕಿಂಜೆ, ಉಪಾಧ್ಯಕ್ಷರಾಗಿ ಹನೀಫ್ ದಾರಿಮಿ ಬೆಳ್ತಂಗಡಿ, ಶರೀಫ್ ಮುಸ್ಲಿಯಾರ್ ಚಾರ್ಮಾಡಿ, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಅಝ್‌ಹರಿ ಕನ್ನಡಿಕಟ್ಟೆ, ಅಬೂಬಕರ್ ಮುಸ್ಲಿಯಾರ್ ಗಾಂಧಿನಗರ, ಪರಿಕ್ಷಾ ಮಂಡಳಿಯ ವ್ಯವಸ್ಥಾಪಕರಾಗಿ ಅಬ್ಬಾಸ್ ಫೈಝಿ ಕಕ್ಕಿಂಜೆ, ಜೊತೆ ವ್ಯವಸ್ಥಾಪಕರಾಗಿ ಸವಾದ್ ಅಝ್‌ಹರಿ ಕಕ್ಕಿಂಜೆ, ಹಂಝ ಮುಸ್ಲಿಯಾರ್ ಕಕ್ಕಿಂಜೆ, ರೇಂಜ್ ಎಸ್‌ಬಿವಿ ವ್ಯವಸ್ಥಾಪಕರಾಗಿ ಇಸ್ಹಾಕ್ ಕೌಸರಿ ಬೆಳ್ತಂಗಡಿ, ಸಂಚಾಲಕರಾಗಿ ಅಬ್ದುಲ್ ಮಜೀದ್ ದಾರಿಮಿ ಪುಂಜಾಲಕಟ್ಟೆ, ರಿಲೀಫ್ ಸೆಲ್ ವ್ಯವಸ್ಥಾಪಕರಾಗಿ ಇಸ್ಮಾಯೀಲ್ ದಾರಿಮಿ ಚಾರ್ಮಾಡಿ, ಸಂಚಾಲಕರಾಗಿ ಅಬ್ದುಲ್ಲಾ ದಾರಿಮಿ ಪೆರಾಲ್ದಕಟ್ಟೆ, ಜಿಲ್ಲಾ ಪ್ರತಿನಿಧಿ ಮುಹಮ್ಮದ್ ಅಶ್ರಫ್ ಫೈಝಿ ಪುಂಜಾಲಕಟ್ಟೆ ಆಯ್ಕೆ ಯಾದರು.
ರೇಂಜ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ದಾರಿಮಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News