ಮೋದಿ ‘ಸ್ವಚ್ಛ್ ಭಾರತ್’ ಎನ್ನುತ್ತಾರೆ, ಆದರೆ ಜನರಿಗೆ ‘ಸಚ್ ಭಾರತ್’ ಬೇಕಾಗಿದೆ: ರಾಹುಲ್ ಗಾಂಧಿ

Update: 2017-08-17 13:39 GMT

ಹೊಸದಿಲ್ಲಿ, ಆ.17: ಕೇಂದ್ರ ಸರಕಾರವು ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದಿರುವ ರಾಹುಲ್ ಗಾಂಧಿ,  ಪ್ರಧಾನಿ ಮೋದಿಯವರು 'ಸ್ವಚ್ಛ ಭಾರತ'ವನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ. ಆದರೆ ನಮಗೆ 'ಸಚ್ ಭಾರತ್' ಬೇಕಾಗಿದೆ ಎಂದಿದ್ದಾರೆ.

“ಪ್ರಧಾನಿ ಮೋದಿ ಹೋದಲ್ಲಿ ಎಲ್ಲಾ ಸುಳ್ಳು ಹೇಳುತ್ತಾರೆ. ಅವರು 'ಸ್ವಚ್ಛ ಭಾರತ' ಮಾಡುತ್ತೇನೆ ಎನ್ನುತ್ತಾರೆ. ಆದರೆ ದೇಶದ ಜನತೆಗೆ ‘ಸಚ್ ಭಾರತ್’ ಬೇಕಾಗಿದೆ. ಕೇಂದ್ರ ಸರಕಾರ ‘ಮೇಕ್ ಇನ್ ಇಂಡಿಯಾ'ದಲ್ಲಿ ವಿಫಲವಾಗಿದೆ. ಮೋದಿಜಿ 'ಮೇಕ್ ಇನ್ ಇಂಡಿಯಾ' ಎನ್ನುತ್ತಾರೆ. ಆದರೆ ಹೆಚ್ಚಿನ ವಿಷಯಗಳು ‘ಮೇಡ್ ಇನ್ ಚೀನಾ’ ಆಗಿದೆ.  ಮೋದಿಜಿಯವರ 'ಮೇಕ್ ಇನ್ ಇಂಡಿಯಾ' ವಿಫಲವಾಗಿದೆ ಎಂದರು.

ಜೆಡಿಯು ನಾಯಕ ಶರದ್ ಯಾದವ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೊದಲಾದವರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News