ವೆನೆಝುವೆಲ: ಜೈಲಿನ ಮೇಲೆ ದಾಳಿ; 37 ಸಾವು

Update: 2017-08-17 16:13 GMT

ಪೋರ್ಟೊ ಒರ್ಡಾಝ್ (ವೆನೆಝುವೆಲ), ಆ. 17: ವೆನೆಝುವೆಲದ ರಾಜ್ಯ ಅಮೆರೊನಾಸ್‌ನ ಕಾರಾಗೃಹವೊಂದರ ಮೇಲೆ ಸರಕಾರಿ ಪಡೆಗಳು ನಡೆಸಿದ ದಾಳಿಯಲ್ಲಿ 37 ಕೈದಿಗಳು ಮೃತಪಟ್ಟಿದ್ದಾರೆ ಎಂದು ಗವರ್ನರ್ ಬುಧವಾರ ತಿಳಿಸಿದರು.

ದೇಶದ ಹೆಚ್ಚಿನ ಜೈಲುಗಳ ನಿಯಂತ್ರಣವನ್ನು ಹಿಂಸಾನಿರತ ಗುಂಪುಗಳು ಹೊಂದಿವೆ ಹಾಗೂ ಅವುಗಳಿಗೆ ಸ್ವಯಂಚಾಲಿತ ಆಯುಧಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳು ಸುಲಭವಾಗಿ ದೊರೆಯುತ್ತವೆ ಎಂಬುದಾಗಿ ಮಾನವಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಅವುಗಳ ಮೇಲೆ ಮತ್ತೆ ನಿಯಂತ್ರಣ ಸಾಧಿಸುವುದಕ್ಕಾಗಿ ಸರಕಾರಿ ಪಡೆಗಳು ದಾಳಿ ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News