ಮೆಲ್ಕಾರ್ ವಿಮೆನ್ಸ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ
Update: 2017-08-17 22:02 IST
ಬಂಟ್ವಾಳ, ಆ. 17: ಇಲ್ಲಿನ ಮೆಲ್ಕಾರ್ ವಿಮೆನ್ಸ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಿಸಲಾಯಿತು.
ಎಸ್ಎಂಆರ್ ಗ್ರೂಪ್ ಮಂಗಳೂರು ಇದರ ನಿರ್ದೇಶಕ ರಿಫಾತ್ ಅಹ್ಮದ್ ಧ್ವಜಾರೋಹಣ ಮಾಡಿದರು.
ಲಿವಾ ಇಂಟರ್ನ್ಯಾಷನ್ ಬ್ರಿಟೀಷ್ ಸ್ಕೂಲ್ ಯುಎಇ ಇದರ ವಿಭಾಗ ಮುಖ್ಯಸ್ಥೆಯಾಗಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಹರೀಟ್ ಔರೇಲಿಯಾ ಕರತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಐವನ್ ಪ್ರಶಾಂತ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.