×
Ad

ಪ್ರವಾದಿ ಇಬ್ರಾಹೀಂ ರ ಬದುಕು ಸಂದೇಶ ಕುರಿತ ವಸ್ತುಪ್ರದರ್ಶನ

Update: 2017-08-17 22:32 IST

ಭಟ್ಕಳ, ಆ. 17: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ನ್ಯೂ ಶಮ್ಸ್ ಸ್ಕೂಲ್ ಪ್ರವಾದಿ ಇಬ್ರಾಹಿಂ ರ ಬದುಕು ಮತ್ತು ಸಂದೇಶ ಕುರಿತ ವಸ್ತುಪ್ರದರ್ಶನ ಆಯೋಜಿತ್ತು. ವಸ್ತುಪ್ರದರ್ಶದ ಉದ್ಘಾಟನೆಯನ್ನು ವಿದ್ವಾಂಸ ಮೌಲಾನ ಒವೇಷ್ ಮದನಿ, ಉಮರಿ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ವಿದ್ವಾಂಸ ಮೌಲಾನ ಮೊಹಸಿನ್ ನದ್ವಿ ಮೊಹತೆಶಮ್ ಪ್ರವಾದಿ ಇಬ್ರಾಹಿಂ ರು ಜಾಗತಿಕ ವ್ಯಕ್ತಿಯಾಗಿದ್ದು ಎಲ್ಲ ಧರ್ಮದ ಪೂರ್ವಜರಾಗಿದ್ದಾರೆ. ಕ್ರೈಸ್ತ, ಯಹೋದಿಯರು ಮತ್ತು ಮುಸ್ಲಿಮರು ಪ್ರವಾದಿ ಇಬ್ರಾಹಿಂ ರನ್ನು ಅನುಸರಿಸುತ್ತಾರೆ. ಮುಸ್ಲಿಮರ ಜಾಗತಿಕ ಪವಿತ್ರ ಯಾತ್ರೆ ಹಜ್ ನಿರ್ವಹಿಸುವುದರ ಹೆಚ್ಚಿನೆಲ್ಲ ಕರ್ಮಗಳು ಇಬ್ರಾಹಿಂ ರನ್ನು ಸ್ಮರಣೆಗಾಗಿ ಆಗಿದ್ದು ಇವರು ಅಲ್ಲಾಹನಿಗೆ ಅತ್ಯಂತ ಪ್ರಿಯಾರಾಗಿದ್ದು ಅದಕ್ಕಾಗಿ ಇವರನ್ನು ಅಲ್ಲಾಹನ ಮಿತ್ರ ಎಂದು ಸಂಬೋಧಿಸಲಾಗಿದೆ ಎಂದರು.

ವಿದ್ಯಾರ್ಥಿಗಳು ಇಬ್ರಾಹಿಂ ರ ಬದುಕು ಮತ್ತು ಸಂದೇಶವನ್ನು ಭಿತ್ತಿಚಿತ್ರ ಹಾಗೂ ಮಾದರಿಗಳ ಮೂಲಕ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದರು.
ಬೀನಾ ವೈದ್ಯ ಇಂಟರ್ ನ್ಯಾಶನಲ್ ಸ್ಕೂಲ್, ಅಲಿ ಪಬ್ಲಿಕ್ ಸ್ಕೂಲ್, ತೌಹಿದ್ ಪ್ರೌಢಶಾಲೆ ಶಿರೂರು ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆ ಜಾಮಿಯಾ ಜಾಲಿ ವಿದ್ಯಾರ್ಥಿಗಳು ವಸ್ತುಪ್ರದರ್ಶನ ಕಂಡು ಶಮ್ಸ್ ಶಾಲಾ ವಿದ್ಯಾರ್ಥಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ರಬಿತಾ ಸಂಸ್ಥೆಯ ಕಾರ್ಯದರ್ಶಿ ಮೌಲಾನ ಸೈಯ್ಯದ್ ಆಹ್ಮದ್ ಜುಷದಿ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಅಬ್ದುಲ್ ರಖೀಬ್ ಎಸ್.ಎಮ್, ಯಾಹ್ಯ ರುಕ್ನುದ್ದೀನ್, ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News