×
Ad

ಆ. 20: ಪಿಪಿಸಿ ಹಳೆ ವಿದ್ಯಾರ್ಥಿ ಸಂಘದ ‘ಪೂರ್ಣ ಸಮ್ಮಿಲನ’

Update: 2017-08-17 22:49 IST

ಉಡುಪಿ, ಆ.17: ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಹಳೆವಿದ್ಯಾರ್ಥಿಗಳ ‘ಪೂರ್ಣ ಸಮ್ಮಿಲನ’ ಆ. 20ರ ರವಿವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಜರಗಲಿದೆ ಎಂದು ಪಿಪಿಸಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಸೋಮಯಾಜಿ ಹೇಳಿದ್ದಾರೆ.

ಉಡುಪಿಯಲ್ಲಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಅಧ್ಯಕ್ಷ ಹಾಗೂ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಬೆಳಗ್ಗೆ 10:00ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಹಾಗೂ ಗೌರವ ಕೋಶಾಧಿಕಾರಿ ಪ್ರದೀಪ್‌ ಕುಮಾರ್ ಅತಿಥಿ ಗಳಾಗಿ ಪಾಲ್ಗೊಳ್ಳುವರು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಾಧಕ ಹಳೆವಿದ್ಯಾರ್ಥಿಗಳಾದ ಡಾ.ನಿ.ಬೀ. ವಿಜಯ ಬಲ್ಲಾಳ್, ಕೆ.ಪ್ರಕಾಶ್ ಶೆಟ್ಟಿ, ರವಿರಾಜ್ ಹೆಗ್ಡೆ, ಡಾ.ಪಿ.ಎಸ್.ಐತಾಳ್, ರತ್ನಕುಮಾರ್, ಮನೋಹರ್ ನಾಯಕ್, ವೀಣಾ ಬನ್ನಂಜೆ, ಗಣೇಶ್ ಕಾಂಚನ್, ಕುಮಾರನಾಥ್ ಯು., ನಾಗರಾಜ ಹೆಬ್ಬಾರ್ ಇವರನ್ನು ‘ದಿ ಪ್ರೈಡ್ ಆಫ್ ಪಿಪಿಸಿ’ ಗೌರವರೊಂದಿಗೆ ಸನ್ಮಾನಿಸಲಾಗುವುದು ಎಂದವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರನ್ನು ಗೌರವಿಸಲಾಗುವುದು. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು. ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮವಿದೆ ಡಾ.ಸೋಮಯಾಜಿ ತಿಳಿಸಿದರು. ಅಲ್ಲದೇ ವಿದುಷಿ ಭ್ರಮರಿ ಶಿವಪ್ರಸಾದ್‌ರಿಂದ ಭರತನಾಟ್ಯ, ತೇಜಸ್ವಿ ಶಂಕರ್‌ರಿಂದ ಜಾದೂ ಪ್ರದರ್ಶನವಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಜಗದೀಶ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಮುರಲಿ ಕಡೆಕಾರ್, ವಿಮಲ ಚಂದ್ರಶೇಖರ್, ಮಂಜುನಾಥ ನಿಟ್ಟೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News