​ದೇಶ ಪ್ರೇಮ ಬೆಳೆಸುವುದರ ಮೂಲಕ ಮಾತ್ರ ದೇಶದ ಅಭಿವೃದ್ದಿ ಸಾಧ್ಯ : ತ್ವಾಹಾ ಸಅದಿ

Update: 2017-08-17 17:45 GMT

ಬಂಟ್ವಾಳ, ಆ.17: ನಮ್ಮದೇಶದ ಅಭಿವೃದ್ದಿಗೆ ಅತೀ ದೊಡ್ಡ ಮಾರ್ಗವೇ ಸರ್ವ ರೂಪದೇಶ ಪ್ರೇಮ ಬೆಳೆಸುವುದಾಗಿರುತ್ತದೆ. ಆ ಮೂಲಕ ಈ ದೇಶ ಅನುಭವಿಸುತ್ತಿರುರ್ವ ಸಮಸ್ಯೆಗಳಿಗೂ ಪರಿಹಾರ ಕಾಣಬಹುದಾಗಿದೆಎಂದು ಅಜಿಲಮೊಗರು ಮಸೀದಿಯ ಧರ್ಮ ಗುರುಗಳಾಗಿರುವ ಪಿ.ಎಸ್‌ತ್ವಾಹ ಸಅದಿ ತಿಳಿಸಿದರು.

ಅವರು ಅಜಿಲಮೊಗರು ಬಾಬಾ ಫಕ್ರುದ್ದೀನ್‌ ಜುಮಾ ಮಸೀದಿ ಹಾಗೂ ದರ್ಸ್ ಮತ್ತು ಮದ್ರಸಗಳ ವತಿಯಿಂದ ಅಜಿಲಮೊಗರು ಮಸೀದಿ ಮುಂಭಾಗದಲ್ಲಿ ಆಗಸ್ಟ್15ರಂದು ನಡೆದ ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣ ಮಾಡುತ್ತಿದ್ದರು.

ಭಾರತೀಯರಾದ ನಾವು ಈ ಭಾರತವನ್ನೂ, ಭಾರತೀಯರನ್ನೂ, ಇಲ್ಲಿಯ ನೆಲ, ಜಲ, ಸಸ್ಯ, ಪರಿಸರ ಮುಂತಾದವುಗಳನ್ನು ಸರಿಯಾದ ರೀತಿಯಲ್ಲಿ ಪ್ರೀತಿಸುವುದಾದರೆ ಈ ಭಾರತ ಅನಿಭವಿಸುತ್ತಿರುವ ಬಡತನ, ನಿರುದ್ಯೋಗ, ಹಿಂಸೆ, ಅಶಾಂತಿ, ಕೋಮುವಾದ, ಭಯೋತ್ಪಾದನೆ ಮುಂತಾದವುಗಳಿಂದ ಮುಕ್ತಗೊಂಡು ಮುಂದಿನ ದಿನದಲ್ಲಿ ವಿಶ್ವದ ನಂಬರ್‌ಒನ್ ಸ್ಥಾನಕ್ಕೆ ಭಾರತವನ್ನುಏರಿಸಲು ಸಾಧ್ಯಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು ಅಂದು ಜಾತಿ, ಮತ, ಪಂಗಡ, ಬೇದ-ಭಾವಗಳಿಲ್ಲದೆ ಒಗ್ಗಟ್ಟಾಗಿ ಹೋರಾಡಿದ ಕಾರಣ ನಮಗೆ ಸ್ವಾತಂತ್ರ್ಯ ಲಭಿಸಿದ್ದರೆ, ಇಂದು ಅವರ ಅದೇ ಮಾರ್ಗವನ್ನು ಅನುಸರಿಸುತ್ತಾ ಎಲ್ಲರೂ ಒಗ್ಗಟ್ಟಾಗಿ ಸಹೋದರತೆಯಿಂದ ಜೀವಿಸಿದರೆ ಮಾತ್ರ ಈ ಭಾರತ ಅಭಿವೃದ್ದಿಯತ್ತ ಸಾಗಲು ಸಾಧ್ಯಎಂದು ಕರೆ ನೀಡಿದರು.

ಇಲ್ಲಿಯ ಮಾಜಿ ಧರ್ಮ ಗುರುಗಳಾದ ಅಬ್ದುಲ್ ಹಮೀದ್ ಮದನಿ ದ್ವಜಾರೋಹಣಗೈದರು, ಸಹ ಮುದರ್ರಿಸರಾಗಿರುವ ಪಿ.ಎಸ್ಮುಝ್ಝಮ್ಮಿಲ್ ಸಖಾಫಿ ದರ್ಸ್ ವಿಧ್ಯಾರ್ಥಿಗಳ ಸ್ವಾತಂತ್ರ್ಯ ವಿಶೇಷಾಂಕ ಪುಸ್ತಕವನ್ನು ಬಿಡುಗಡೆ ಗೊಳಿಸಿದರು. ಬಳಿಕ ಪ್ರತಿಜ್ಙಾ ಭೋಧನೆ ಹಾಗೂ ದರ್ಸ್ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಹಾಗೂ ವಿವಿಧ ಭಾಷೆಗಳ ಭಾಷಣಗಳು ನಡೆಯಿತು.

ಮದ್ರಸಾ ಮುಖ್ಯೋಪಾಧ್ಯಾಯರಾದ ಕಬೀರ್‌ ಅಹ್ಸನಿ, ಹಮೀದ್ಮದನಿ, ಇಬ್ರಾಹೀಂಗಂಡಿ, ಅಬ್ದುಲ್‌ ಖಾದಿರ್‌ ಇಖ್ರಾ, ಸುಲೈಮಾನ್‌ ಗಂಡಿ, ಆದಂಕುಞ್ಞೆ, ದಾವೂದ್, ಚೆರಮೋನ್‌ಗಂಡಿ, ಕರೀಂ, ಅಬ್ದುಲ್‌ ಖಾದಿರ್‌ ಮಾಲಿದಕೆರೆ, ಮೋನಾಕ ಮುಂತಾದ ಊರಿನ ಹಲವಾರು ಗಣ್ಯರು ಹಾಗೂ ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದರ್ಸ್ ವಿದ್ಯಾರ್ಥಿಗಳಾದ ಆದಂಬಟ್ಟೆ ಮಲ್ಲಪ್ಪ ಸ್ವಾಗತಿಸಿ, ಹಾಫಿಳ್ ಕಬೀರ್ ತೀರ್ಥಹಳ್ಳಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News