​ಜೀಪು ಢಿಕ್ಕಿ: ಸೊತ್ತುಗಳಿಗೆ ಹಾನಿ

Update: 2017-08-17 17:59 GMT

ಕಾಪು, ಆ.17: ಪೊಲಿಪು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ವಿಭಜಕ ದಲ್ಲಿ ಅಳವಡಿಸಿದ ಸೊಲಾರ್ ಬ್ಲಿಂಕರ್ ಪೊಲ್ ಮತ್ತು ಮೆಟಲ್ ಬೀಮ್ ಕ್ರ್ಯಾಶ್ ಬ್ಯಾರಿಯರ್ಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಜೀಪು, ಚಾಲಕ ಬಿಪಿನ್ ಮಡಿಕೇರಿ ಎಂಬಾತನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದಲ್ಲಿ ಅಳವಡಿ ಸಿದ ಸೊಲಾರ್ ಬ್ಲಿಂಕರ್ ಪೊಲ್ ಮತ್ತು ಮೆಟಲ್ ಬೀಮ್ ಕ್ರ್ಯಾಶ್ ಬ್ಯಾರಿಯರ್ಗೆ ಡಿಕ್ಕಿ ಹೊಡೆಯಿತು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News