ಕಾರ್ಕಳದಲ್ಲಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ

Update: 2017-08-17 18:15 GMT

ಕಾರ್ಕಳ, ಆ.17: ಕಮಲೇಶಚಂದ್ರ ವರದಿಗೆ ಸಂಘಟನೆ ನೀಡಿದ ಮಾರ್ಪಾಡುಗಳೊಂದಿಗೆ ಜಾರಿಗೊಳಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಕಾರ್ಕಳ ಅಂಚೆ ಕಛೇರಿಯಲ್ಲಿ ಅನಿದೀಷ್ಠಾವಧಿ ಮುಷ್ಕರ ನಡೆಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ  ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ದೇಶ ವಿದೇಶಗಳ ಸುದ್ದಿಯನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವಂತಹ ಕೆಲಸ ಈ ಅಂಚೆ ನೌಕರರಿಂದ ಅಗುತ್ತಿದೆ. ಇಷ್ಟು ದೊಡ್ಡ ದೇಶದಲ್ಲಿ ಈ ಜನರ ಸಣ್ಣ ಬೇಡಿಕೆಯನ್ನು ಈಡೇರಿಸದೇ ಇರುವುದು ಅತ್ಯಂತ ಬೇಸರದಾಯಕವಾಗಿದೆ. ಇಂದು ಇಲ್ಲಿ ನಡೆಯುವ ಪ್ರತಿಭಟನೆಗೆ ಅರ್ಥ ಸಿಗುವ ತನಕ ಹೋರಟ ನಡೆಸಬೇಕು ಕೇವಲ ಪ್ರತಿಭಟನೆ ಒಂದು ದಿನಕ್ಕೆ ಸಿಮಿತವಾಗದೇ ನ್ಯಾಯ ಸಿಗುವವರೆಗೆ ಹೋರಾಟ ಮಾಡಬೇಕಾಗಿದೆ ಈ ಹೋರಾಟಕ್ಕೆ ಸದಾ ನಮ್ಮ ಬೆಂಬಲ ಇದೆ ಎಂದರು.

*ಜಿಡಿಎಸ್ ನೌಕರರ ಶ್ರೀ ಕಮಲೇಶ್ಚಂದ್ರ ಸಮಿತಿ ವರದಿಯನ್ನು ಎಐಜಿಡಿಎಸ್‌ಯು ಸಂಘ ಕೊಟ್ಟಂತಹ ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೊಳಿಸಬೇಕು. ಬ್ರಾಂಚ್ ಪೋಸ್ಟ್ ಆಫೀಸ್‌ಗಳ ಅವಯನ್ನು 8 ಗಂಟೆಗೆ ನಿಗದಿಗೊಳಿಸಿ ಗ್ರಾಮೀಣ ಅಂಚೆ ನೌಕರರನ್ನು ಇಲಾಖಾ ನೌಕರರಂತೆ ಖಾಯಂಗೊಳಿಸಬೇಕು. ದೆಹಲಿ ಮತ್ತು ಮದ್ರಾಸು ನ್ಯಾಯಾಲಯಗಳ ಆದೇಶದಂತೆ ಜಿಡಿಎಸ್ ನೌಕರರಿಗೆ ನಿವೃತ್ತ ವೇತನ ನೀಡಬೇಕು. ಟಾರ್ಗೆಟ್ ಹೆಸರಿನಲ್ಲಿ ಗ್ರಾಮೀಣ ಅಂಚೆ ನೌಕರರ ಮೇಲಿನ ದೌರ್ಜನ್ಯ ನಿಲ್ಲಲಿ.

ಅಂಚೆ ಇಲಾಖೆಗೆ ಗರಿಷ್ಠ ಆದಾಯ ತರುವ ಗ್ರಾಮೀಣ ಅಂಚೆ ನೌಕರರಿಗೆ ಇ.ಎಸ್.ಟಿ., ಪಿ.ಎಫ್., ಇಂಕ್ರಿಮೆಂಟ್ ಸೌಲಭ್ಯ ನೀಡಬೇಕು. ಗ್ರಾಮೀಣ ನೌಕರರಿಗೆ ಸಿಗುವ ಗ್ರಾಚ್ಯುಯಿಟಿಯನ್ನು ಕಮಲೇಶ್ಚಂದ್ರ ಕಮಿಟಿ ವರದಿಯಲ್ಲಿ 5,00,000 ಗೊತ್ತು ಮಾಡಿದ್ದು ಅದನ್ನು ಅಧಿಕಾರಿಗಳು 1,50,00ಕ್ಕೆ ಇಳಿಸಿದ್ದು, ಕಮಿಟಿಯ ಮೂಲ ವರದಿಯಂತೆ 5,00,000 ವನ್ನೇ ನೀಡುವುದು.  ಗ್ರಾಮೀಣ ಪ್ರದೇಶದಲ್ಲಿರುವ ಅಂಚೆ ಕಚೇರಿಯಲ್ಲಿ ಎರಡು ಹುದ್ದೆ ನಿಭಾಯಿಸುತ್ತಿದ್ದುದನ್ನು ನಿಲ್ಲಿಸಿ, ಅಂತಹ ಅಂಚೆ ಕಚೇರಿಯಲ್ಲಿ ಎರಡು ಹುದ್ದೆಯನ್ನು ಕಡ್ಡಾಯವಾಗಿ ಕೊಡಬೇಕು. ಗ್ರಾಮೀಣ ಅಂಚೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು. *8 ಗಂಟೆಯ ಕೆಲಸವನ್ನು 3 ಮತ್ತು 4 ಗಂಟೆಗೆ ನಿಗದಿಗೊಳಿಸಿ ನಮ್ಮನ್ನು ಜೀತದಾಳಿನಂತೆ ದುಡಿಸುವುದನ್ನು ನಿಲ್ಲಿಸಬೇಕು ಎಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News