ಆ. 18: ಅಡ್ಡೂರು ಸರಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ

Update: 2017-08-17 18:26 GMT

ಅಡ್ಡೂರು, ಆ.17:  ಇಲ್ಲಿನ  ಸರಕಾರಿ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಪಡಿಸಲು ಗ್ರಾಮದ  ನಾನಾ ಸಂಘ- ಸಂಸ್ಥೆಗಳು ಒಂದು ಗೂಡಿದ ಬೆನ್ನಲ್ಲೇ, ರಾಜ್ಯ ಸರಕಾರವು ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಎಲ್ಲಾ  ಸರಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿ ಸಂಘ ರಚಿಸಿ ಆ ಮೂಲಕ ಶಾಲೆಗೆ ಸರಕಾರದ ವಿಶೇಷ ಸವಲತ್ತು ಒದಗಿಸಲು ಮುಂದಾಗಿದೆ ಎಂದು ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ ಸರಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚಿಸಿ, ರಾಜ್ಯ ಸರಕಾರದ ಸವಲತ್ತು ಪಡೆಯುವ ಪ್ರಯತ್ನಕ್ಕೆ ಇಳಿದಿದೆ. ಈ ಕುರಿತು ಆ. 18ರಂದು ಮಧ್ಯಾಹ್ನ 2:30ಕ್ಕೆ ಅಡ್ಡೂರು ಸರಕಾರಿ ಶಾಲೆಯಲ್ಲಿ  ಹಳೆ ವಿದ್ಯಾರ್ಥಿ ಸಂಘ ರಚಿಸಲು ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಗ್ರಾಮದ ಹಳೆ ವಿದ್ಯಾರ್ಥಿಗಳು ಭಾಗಿಯಾಗಿ ಯಶಸ್ವಿ ಗೊಳಿಸಬೇಕು ಎಂದು ಶಾಲಾ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಡಾ.ಇ.ಕೆ. ಸಿದ್ದೀಕ್  ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News