ಶೀಘ್ರದಲ್ಲೇ ಆರ್ ಬಿಐ ಬಿಡುಗಡೆಗೊಳಿಸಲಿರುವ ನೂತನ 50 ರೂ. ನೋಟಿನ ವಿಶೇಷತೆಗಳಿವು...

Update: 2017-08-18 14:33 GMT

ಹೊಸದಿಲ್ಲಿ, ಆ.18: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ 50 ರೂ. ಮುಖಬೆಲೆಯ ನೋಟುಗಳನ್ನು ಹೊರತರಲಿದ್ದು, ನೂತನ 50 ರೂ. ನೋಟಿನ ಫೋಟೊಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದೆ.

ಈ ನೋಟುಗಳ ಹಿಂಭಾಗದಲ್ಲಿ ಕರ್ನಾಟಕ ಹಂಪಿಯ ಕಲ್ಲಿನ ರಥದ ಚಿತ್ರವಿರುವುದು ಮತ್ತೊಂದು ವಿಶೇಷತೆಯಾಗಿದೆ. 500 ಹಾಗೂ 1000 ರೂ. ನೋಟುಗಳ ಅಮಾನ್ಯದ 9  ತಿಂಗಳ ನಂತರ 50 ರೂ.ನ ನೂತನ ನೋಟನ್ನು ಆರ್ ಬಿಐ ಬಿಡುಗಡೆ ಮಾಡುತ್ತಿದೆ.  ದೇವನಾಗರಿ ಲಿಪಿಯಲ್ಲಿ 50 ನ್ನು ಬರೆಯಲಾಗಿದೆ. ನೋಟಿನ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿಯವರ ಚಿತ್ರವಿದ್ದು, ದೊಡ್ಡ ಅಕ್ಷರಗಳಲ್ಲಿ ‘ಆರ್ ಬಿಐ’, ‘ಭಾರತ್’, ‘ಇಂಡಿಯಾ’ ಹಾಗೂ 50 ಎಂದು ಬರೆಯಲಾಗಿದೆ.

ನೋಟಿನ ಹಿಂಭಾಗದಲ್ಲಿ ಎಡಭಾಗದಲ್ಲಿ ಮುದ್ರಣದ ವರ್ಷ, ಘೋಷಣೆಯೊಂದಿಗೆ ಸ್ವಚ್ಛ ಭಾರತದ ಚಿಹ್ನೆ, ಭಾಷಾ ಫಲಕ, ಹಂಪಿ ರಥದ ಚಿತ್ರವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News