ಬಾರ್ಸಿಲೋನಾ: ಭಯೋತ್ಪಾದಕ ದಾಳಿಯಿಂದ ಪಾರಾಗಲು ಭಾರತೀಯ ಮೂಲದ ನಟಿ ಮಾಡಿದ್ದೇನು ಗೊತ್ತೇ?
ಲಂಡನ್, ಆ.18: ಬಾರ್ಸಿಲೋನಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭ ಭಾರತೀಯ ಮೂಲದ ಟಿವಿ ನಟಿಯೊಬ್ಬರು ತಾನು ರೆಸ್ಟೋರೆಂಟ್ ಒಂದರ ಫ್ರೀಝರ್ ನಲ್ಲಿ ಅಡಗಿಕೂತಿದ್ದೆ ಎಂದು ಹೇಳಿಕೊಂಡಿದ್ದಾರೆ. ಬಾರ್ಸಿಲೋನಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 14 ಮಂದಿ ಮೃತಪಟ್ಟು ಸುಮಾರು 100 ಮಂದಿ ಗಾಯಗೊಂಡಿದ್ದರು.
46 ವರ್ಷದ ಲೈಲಾ ರವಾಸ್ ತನ್ನ 10 ವರ್ಷದ ಪುತ್ರಿಯೊಂದಿಗೆ ನಗರದಲ್ಲಿದ್ದಾಗ ಈ ದಾಳಿ ನಡೆದಿದೆ. ಈ ಸಂದರ್ಭ ಆಕೆ ರೆಸ್ಟೋರೆಂಟ್ ನ ಫ್ರೀಝರ್ ನಲ್ಲಿ ಅಡಗಿಕೂತಿದ್ದಾರೆ. ಅಲ್ಲಿಂದಲೇ ಅವರು, “ದಾಳಿಯ ಮಧ್ಯದಲ್ಲೇ ರೆಸ್ಟೋರೆಂಟ್ ನ ಫ್ರೀಝರ್ ನಲ್ಲಿ ಅಡಗಿ ಕೂತಿದ್ದೇನೆ. ಇಲ್ಲಿರುವ ಎಲ್ಲರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಗುಂಡಿನ ಸದ್ದು ಈಗಷ್ಟೇ ಕೇಳಿತು. ಸಶಸ್ತ್ರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ರವಾಸ್ ಅವರ ತಂದೆ ಮೊರೊಕ್ಕನ್ ಆಗಿದ್ದು, ತಾಯಿ ಭಾರತೀಯರಾಗಿದ್ದಾರೆ. ಈಕೆ ಬ್ರಿಟಿಷ್ ಟೆಲಿವಿಷನ್ ‘ಫುಟ್ಬಾಲರ್ಸ್ ವೈವ್ಸ್’ ಹಾಗೂ ‘ಹಾಲ್ಬಿ ಸಿಟಿ’ ಗಳಲ್ಲಿ ನಟಿಸಿದ್ದರು.