ಆ. 21: ಅಮೆರಿಕದಲ್ಲಿ ಸಂಪೂರ್ಣ ಸೂರ್ಯಗ್ರಹಣ

Update: 2017-08-18 16:14 GMT

ಮಯಾಮಿ (ಅಮೆರಿಕ), ಆ. 18: ಸುಮಾರು ಒಂದು ಶತಮಾನದ ಬಳಿಕ ಉತ್ತರ ಅಮೆರಿಕ ಖಂಡದಲ್ಲಿ ಆಗಸ್ಟ್ 21ರಂದು ಮೊದಲ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ.

‘ಗ್ರೇಟ್ ಅಮೆರಿಕನ್ ಸೂರ್ಯಗ್ರಹಣ’ವನ್ನು ನೋಡಲು ಪ್ರವಾಸಿಗರು ಅಮೆರಿಕಕ್ಕೆ ಧಾವಿಸುತ್ತಿದ್ದಾರೆ.

ಸೂರ್ಯಗ್ರಹಣದ ದಿನದಂದು ಅಮೆರಿಕದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸೂರ್ಯಗ್ರಹಣದ ಸಮಯದಲ್ಲೇ ಹಲವು ಜೋಡಿಗಳು ಮದುವೆಯಾಗಲು ನಿರ್ಧರಿಸಿವೆ.

‘‘ದೇಶದ ಹೆಚ್ಚಿನ ಭಾಗದ ಜನರಿಗೆ ಈ ಗ್ರಹಣವನ್ನು ಸುಲಭದಲ್ಲಿ ನೋಡಲು ಸಾಧ್ಯವಾಗುತ್ತದೆ’’ ಎಂದು ಫ್ಲೋರಿಡ ಇಂಟರ್‌ನ್ಯಾಶನಲ್ ವಿಶ್ವವಿದ್ಯಾನಿಲಯದಲ್ಲಿ ಖಗೋಳ ವಿಜ್ಞಾನಿಯಾಗಿರುವ ಜೇಮ್ಸ್ ವೆಬ್ ಹೇಳುತ್ತಾರೆ.

ಅಮೆರಿಕದ 14 ರಾಜ್ಯಗಳಲ್ಲಿ ಸೂರ್ಯಗ್ರಹಣ ಪೂರ್ಣವಾಗಿರುತ್ತದೆ. ಇಲ್ಲಿ ಸೂರ್ಯನ ಬೆಳಕು ಚೂರೂ ಭೂಮಿಗೆ ಬಾರದಂತೆ ಚಂದ್ರ ತಡೆಯುತ್ತದೆ.

ಬರಿಗಣ್ಣಲ್ಲಿ ನೋಡಿದರೆ ಕಣ್ಣೇ ನಾಶ!

ಬರಿಗಣ್ಣಿನಿಂದ ಸೂರ್ಯಗ್ರಹಣವನ್ನು ನೋಡಿದರೆ ಕಣ್ಣಿನ ರೆಟಿನ ಸುಟ್ಟುಹೋಗಬಹುದು ಹಾಗೂ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಕಲೆಗಳು ಉಂಟಾಗಬಹುದು ಎಂದು ಪರಿಣತರು ಎಚ್ಚರಿಸುತ್ತಾರೆ.

ಗ್ರಹಣ ವೀಕ್ಷಣೆಗೆಂದೇ ತಯಾರಾದ ಕನ್ನಡಕಗಳನ್ನು ಧರಿಸಿ ಸೂರ್ಯಗ್ರಹಣ ನೋಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಸಾಮಾನ್ಯವಾಗಿ ಧರಿಸುವ ಸನ್‌ಗ್ಲಾಸ್‌ಗಳು ಸುರಕ್ಷಿತವಲ್ಲ ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News