45 ವರ್ಷ ಬಳಿಕ ಲಂಕಾ ನೌಕಾಪಡೆಗೆ ತಮಿಳು ಮುಖ್ಯಸ್ಥ

Update: 2017-08-18 16:19 GMT

ಕೊಲಂಬೊ, ಆ. 18: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶುಕ್ರವಾರ ಅಲ್ಪಸಂಖ್ಯಾತ ತಮಿಳು ಸಮುದಾಯಕ್ಕೆ ಸೇರಿದ ರಿಯರ್ ಅಡ್ಮಿರಲ್ ಟ್ರಾವಿಸ್ ಸಿನ್ನಯ್ಯರನ್ನು ದೇಶದ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.

45 ವರ್ಷಗಳ ಹಿಂದೆ 1972ರಲ್ಲಿ ಎಲ್ಟಿಟಿಇ ಉಗ್ರವಾದಿಗಳು ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಸಶಸ್ತ್ರ ಹೋರಾಟ ಆರಂಭಿಸಿದ ಬಳಿಕ ನೌಕಾಪಡೆಯ ಮುಖ್ಯಸ್ಥರನ್ನಾಗಿ ತಮಿಳು ವ್ಯಕ್ತಿಯೊಬ್ಬರ ನೇಮಕವಾಗಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News