ಆ. 20: ‘ಶಮಾ ಗೋಲ್ಡ್’ ಶುಭಾರಂಭ
ಮಂಗಳೂರು, ಆ. 18: ಬಜ್ಪೆ ಮುಖ್ಯ ಜಂಕ್ಷನ್‌ನಲ್ಲಿರುವ ಪ್ಲಾಮಾ ಕಾಸ್ಟಲ್‌ನ ಕಟ್ಟಡದಲ್ಲಿ ನೂತನ ‘ಶಮಾ ಗೋಲ್ಡ್’ ಮಳಿಗೆಯು ಆ. 20ರಂದು ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ.
ಅಲ್‌ಹಾಜ್ ಜಬ್ಬಾರ್ ಉಸ್ತಾದ್ ದುಆ ನೆರವೇರಿಸಲಿದ್ದು, ಸಚಿವ ಬಿ.ರಮಾನಾಥ ರೈ ಉದ್ಘಾಟನೆ ಮಾಡಲಿದ್ದಾರೆ. ಸಚಿವ ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವ, ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಾಜಿ ಬಿ.ಶೇಕುಂಞಿ, ಬಜ್ಪೆ ಜುಮಾ ಮಸೀದಿಯ ಖತೀಬ್ ಹಾಜಿ ಅಬ್ದುರ್ರಝಾಕ್ ಮದನಿ, ಬಜ್ಪೆ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಹಾಜಿ ಇಸ್ಮಾಯೀಲ್ ಜವಲಿ, ಕೆಎಸ್‌ಎ ಅಲ್‌ಮುಝೈನ್‌ನ ನಿರ್ದೇಶಕ ಝಕರಿಯ್ಯಾ ಜೋಕಟ್ಟೆ, ವೈಟ್ ಸ್ಟೋನ್‌ನ ಅಧ್ಯಕ್ಷ ಬಿ.ಎಂ.ಶರೀಫ್, ಉಡುಪಿ ಬಳಕೆದಾರರ ವೇದಿಕೆಯ ಅಧ್ಯಕ್ಷ ಕೆ.ಅಬೂಬಕರ್ ಹಾಜಿ, ಶಾಹುಲ್ ಹಮೀದ್, ಯು.ಪಿ.ಇಬ್ರಾಹೀಂ, ಪಿ.ಎನ್.ಬಾಲಕೃಷ್ಣ, ಎಂ.ಸುಹೈಬ್, ರೋಸಿ ಮಥಾಯಿಸ್, ವಸಂತಿ ಕಿಶೋರ್, ಜಯರಾಮ ಶೆಟ್ಟಿ, ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.