×
Ad

2017ರಲ್ಲಿ ಪ್ರತಿ ವಾರ 1 ಗೋವು ಸಂಬಂಧಿ ಹಿಂಸಾಚಾರ

Update: 2017-08-19 19:47 IST

ಹೊಸದಿಲ್ಲಿ, ಆ.19: ಭಾರತದಲ್ಲಿ 2017ರಲ್ಲಿ ಗೋವಿಗೆ ಸಂಬಂಧಿಸಿದ 30 ಹಿಂಸಾಚಾರದ ಘಟನೆಗಳು ನಡೆದಿವೆ. ಕಳೆದ 8 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚು ಘಟನೆಗಳು ಸಂಭವಿಸಿದೆ.

ಗೋವಿಗೆ ಸಂಬಂಧಿಸಿದ ಹಿಂಸಾಚಾರದ ಬಗ್ಗೆ ಇಂಗ್ಲೀಷ್ ಪತ್ರಿಕೆಯೊಂದು ಇತ್ತೀಚೆಗೆ ಅಂಕಿ-ಅಂಶ ಸಂಗ್ರಹಿಸಿ ವಿಶ್ಲೇಷಣೆ ನಡೆಸಿದೆ. 2017 ಆಗಸ್ಟ್ 18ರ ವರೆಗಿನ ಅಂಕಿ-ಅಂಶವನ್ನು ಅದು ಸಂಗ್ರಹಿಸಿದೆ.

 ಆಗಸ್ಟ್ 17ರಂದು ಬಿಹಾರದ ದುಮ್ರಾ ಗ್ರಾಮದಲ್ಲಿ ಮುಹಮ್ಮದ್ ಶಹಾಬುದ್ದೀನ್ ಮನೆಯನ್ನು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರೂ ಸೇರಿದಂತೆ ಜನರ ಗುಂಪೊಂದು ಸುತ್ತುವರಿದಿತ್ತು.

ಶಹಾಬುದ್ದೀನ್ ಗೋಮಾಂಸ ಭಕ್ಷಣೆ ಮಾಡಿದ್ದಾರೆ ಹಾಗೂ ತನ್ನ ನೆರೆಹೊರೆಯವರಿಗೆ ಹಂಚಿದ್ದಾರೆ ಎಂದು ಆರೋಪಿಸಿ ಗುಂಪು ಶಹಾಬುದ್ದೀನ್ ಹಾಗೂ ಇತರ 6 ಮಂದಿಯನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕಿ ಥಳಿಸಿತ್ತು.

ಇದು ಕಳೆದ ಮೂರು ವಾರಗಳಲ್ಲಿ ಬಿಹಾರದಲ್ಲಿ ನಡೆದ ಎರಡನೇ ಹಾಗೂ ಈ ವರ್ಷ ರಾಜ್ಯದಲ್ಲಿ ನಡೆದ ನಾಲ್ಕನೇ ಹಿಂಸಾಚಾರದ ಘಟನೆ. ಬಿಹಾರದಲ್ಲಿ 2010ರಿಂದ ಕಳೆದ ವರ್ಷದ ವರೆಗೆ ಗೋವಿಗೆ ಸಂಬಂಧಿಸಿ ಯಾವುದೇ ಹಿಂಸಾಚಾರ ನಡೆದಿಲ್ಲ.

 ಅಂಕಿ-ಅಂಶದ ಪ್ರಕಾರ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಶೇ. 97ರಷ್ಟು ಹಿಂಸಾಚಾರದ ಘಟನೆಗಳು ನಡೆದಿವೆ.

 2010ರಿಂದ 2017ರ ವರೆಗೆ 8 ವರ್ಷಗಳಲ್ಲಿ ಗೋವಿಗೆ ಸಂಬಂಧಿಸಿದ ಹಿಂಸಾಚಾರದ ಪ್ರರಕರಣಗಳಲ್ಲಿ ಶೇ. 56ರಷ್ಟು ಮುಸ್ಲಿಮರನ್ನೇ ಗುರಿ ಮಾಡಲಾಗಿದೆ. 75 ಪ್ರಕರಣಗಳಲ್ಲಿ ಶೇ. 86ರಷ್ಟು ಹತ್ಯೆ ಮಾಡಲಾಗಿದೆ.

 ಗೋವಿಗೆ ಸಂಬಂಧಿಸಿದ ಶೇ. 53ರಷ್ಟು ಪ್ರಕರಣಗಳು ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಸಂಭವಿಸಿದೆ. ಬಿಹಾರದಲ್ಲಿ ಇತ್ತೀಚೆಗೆ ಸಂಭವಿಸಿದೆ 2 ಗೋವಿಗೆ ಸಂಬಂಧಿ ಹಿಂಸಾಚಾರ ಜನಾತಾದಳ (ಯು) ಸರಕಾರದ ಆಡಳಿತದ ಅವಧಿಯಲ್ಲಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News