×
Ad

ಕರಾಟೆ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆ

Update: 2017-08-19 22:33 IST

ಮೂಡುಬಿದಿರೆ, ಆ. 19: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಮಿಜಾರಿನಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೋಟೆಬಾಗಿಲಿನ ಮಹಮ್ಮದೀಯ ಆ.ಮಾ.ಶಾಲೆಯ ಆಯಿಶಾ ರಿದಾ ಬಾಲಕಿಯರ 22 ಕೆ.ಜಿ. ವಿಭಾಗದಲ್ಲಿ ಪ್ರಥಮ ಹಾಗೂ 26 ಕೆ.ಜಿ. ವಿಭಾಗದಲ್ಲಿ ಖತೀಜಾ ಅಸ್ಬಾ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ 22 ಕೆ.ಜಿ. ವಿಭಾಗದಲ್ಲಿ ಮಹಮ್ಮದ್ ಸಂಜೀದ್ ಸಿನಾನ್ ಹಾಗೂ 38 ಕೆ.ಜಿ. ವಿಭಾಗದಲ್ಲಿ ಮಹಮ್ಮದ್ ಅಫ್ಝಲ್ಆದಂ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಬಾಲಕರ 49 ಕೆ.ಜಿ. ವಿಭಾಗದಲ್ಲಿ ಶೇಖ್ ಮಹಮ್ಮದ್ ನುಝೈದ್ ತೃತೀಯ ಸ್ಥಾನ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪ್ರವೀಣ್ ನಜರೆತ್, ಕರಾಟೆ ತರಬೇತುದಾರ ಸಫ್ರಾಜ್ ಹಾಗೂ ದೈ.ಶಿ.ಶಿ. ಅರವಿಂದ್ ನಾಯ್ಕ ಉಪಸ್ಥಿತರಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News