ನಡುಪಳ್ಳಿ ದರ್ಗಾ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ

Update: 2017-08-19 17:10 GMT

ಮಂಗಳೂರು, ಆ.19: ಕಣ್ಣೂರು ನಡುಪಳ್ಳಿ ದರ್ಗಾದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸುಮಾರು 400 ವರ್ಷ ಇತಿಹಾಸವಿರುವ ನಡುಪಳ್ಳಿ ದರ್ಗಾದ ಪುನರುಜ್ಜೀವನಕ್ಕೆ ಅಗತ್ಯವಾದ ಕ್ರಮ ತೆಗೆದುಕೊಳ್ಳಲಾಗುವುಸದ್ಯ 1 ಕೋ.ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದರು.

ನದಿಯ ಮಧ್ಯೆ ಈ ದರ್ಗಾವಿದ್ದು, ವರ್ಷದಿಂದ ವರ್ಷಕ್ಕೆ ಇದರ ದಡ ಕುಸಿಯುತ್ತಾ ಬಂದಿದೆ. ಈಗ ಅದಕ್ಕೆ ತಡೆಗೋಡೆ ನಿರ್ಮಿಸುವ ಮೂಲಕ ದರ್ಗಾದ ಮುಂದೆ ಮತ್ತಷ್ಟು ಕುಸಿಯದಂತೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಇಕ್ಬಾಲ್, ಕೆಸಿಡಿಸಿ ಸದಸ್ಯ ಹಮೀದ್ ಕಣ್ಣೂರು, ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ರಫೀಕ್ ಕಣ್ಣೂರು, ಕಾಂಗ್ರೆಸ್ ಮುಖಂಡ ಉಮರಬ್ಬ, ಮುಹಮ್ಮದ್ ಹಾಜಿ ಡಿ.ಎಂ., ಶರೀಫ್ ಐಮೋನು, ಅಬೂಬಕರ್, ಟಿ.ಅಬ್ದುಲ್ ಖಾದರ್, ಹುಸೈನ್ ಕುಂದಾಳ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News