ನಾಯಕತ್ವ -ಸಮುದಾಯ ಅಭಿವೃದ್ಧಿ ತರಬೇತಿ ಸಮಾರೋಪ
ಉಡುಪಿ, ಆ.19: ಉಡುಪಿ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ಐದು ದಿನಗಳ ಕಾಲ ಹಮ್ಮಿಕೊಳ್ಳಲಾದ ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.
ಉಡುಪಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸಮಾರೋಪ ಭಾಷಣ ಮಾಡಿ, ಯುವಕರು ಇನ್ನು ಹೆಚ್ಚು ಸಂಘಟಿತರಾಗಿ ತಮ್ಮ ಯುವ ಶಕ್ತಿಯ ಸಾಮರ್ಥ್ಯ ವನ್ನು ಅರಿತು, ಸಮಯದ ಪ್ರಜ್ಞೆ ಹಾಗೂ ಸಮಾಜದಲ್ಲಿ ಸಿಕ್ಕ ಅವಕಾಶಗಳನ್ನು ಸಮಾಜದ ಸರ್ವೋನ್ನುತ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಸುಷ್ಮಾ ಹಾಗೂ ಅನೂಷಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಎಸ್.ಕೆ.ಡಿ.ಆರ್.ಡಿ.ಪಿ. ನಿರ್ದೇಶಕ ಪುರುಷೋತ್ತಮ ಪಿ.ಕೆ. ವಹಿಸಿದ್ದರು.
ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಫ್ರೇಡ್ ಡಿಸೋಜ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಶ್ರೀರಾಮ್ ಸ್ವಾಗತಿಸಿದರು. ಪ್ರತಿಭಾ ಕಾರ್ಯ ಕ್ರಮ ನಿರೂಪಿಸಿದರು.