×
Ad

ನಿವೃತ್ತ ಜಲಾಂತರ್ಗಾಮಿ ಜಯಶೆಟ್ಟಿಗೆ ರೋಟರಿ ಸನ್ಮಾನ

Update: 2017-08-19 23:12 IST

ಮೂಡುಬಿದಿರೆ, ಆ. 19: ಭಾರತೀಯ ನೌಕಾದಳದಲ್ಲಿ ಜಲಾಂತರ್ಗಾಮಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಬೆಳುವಾಯಿ ಗ್ರಾಮದ ಚಿಲಿಂಬಿ ಗಿರಿಶಿಖರದ ಜಯಶೆಟ್ಟಿ(77) ಅವರ ನಿವಾಸದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮೂಡುಬಿದಿರೆ ರೋಟರಿ ಕ್ಲಬ್ ಸುವರ್ಣ ಮಹೋತ್ಸವದ ನೆನಪಿಗಾಗಿ  ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು  ಭಾರತೀಯ ನೌಕಾದಳದ ನಿವೃತ್ತ ಯೋಧ ಜಲಾಂತರ್ಗಾಮಿ ಜಯಶೆಟ್ಟಿಯವರಿಗೆ ರೋಟರಿ ಅಧ್ಯಕ್ಷ ಶ್ರೀಕಾಂತ ಕಾಮತ್ ಅವರು ಶಾಲು ಹೊದಿಸಿ, ಫಲಪುಷ್ಪವನ್ನಿತ್ತು ಗೌರವಿಸಿದರು.

ಪದಾಧಿಕಾರಿಗಳಾದ ಮಹಮ್ಮದ್ ಆರೀಫ್, ಸಿ.ಎಚ್. ಅಬ್ದುಲ್ ಗಫೂರ್ ಮತ್ತು ಕಜಂಗೆ ಸುದರ್ಶನ್ ಜೈನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News