ಅಂತರ್ ಕಾಲೇಜು ಸಾಹಿತ್ಯ ಸ್ಪರ್ಧೆ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

Update: 2017-08-19 17:44 GMT

ಮೂಡುಬಿದಿರೆ, ಆ. 19: ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೆಶನಾಲಯದಡಿಯಲ್ಲಿ ನಡೆದ ಅಂತರ್ ಕಾಲೇಜು ಸಾಹಿತ್ಯ ಸ್ಪರ್ಧೆಗಳಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಮಂಗಳೂರಿನ  ರೊಝರಿಯೋ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಸುಮಾರು 35 ಕಾಲೇಜುಗಳ ಮಧ್ಯೆ ನಡೆದ ಸ್ಪರ್ಧೆಗಳಲ್ಲಿ ಆಳ್ವಾಸ್ ತಂಡವು ಪ್ರಶಸ್ತಿಯನ್ನು ಪಡೆದಿದೆ.

ಚರ್ಚಾ ಸ್ಪರ್ಧೆಯ ಇಂಗ್ಲೀಷ್ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅಶ್ವಿನಿ ಜೈನ್, ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಆಯನಾ ಎಮ್. ಜೋಸ್ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ರಕ್ಷಾ ಕೆ.ಪಿ. ಶೆಟ್ಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಆದರ್ಶ್ ಜೆ., ರಾಹುಲ್ ಎಮ್. ಹಾಗೂ ರಕ್ಷಾ ಚಂದ್ರ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಕನ್ನಡ ವಿಭಾಗದಲ್ಲಿ ಫಾಝಿಲ್ ಅಹಮದ್  ತೃತೀಯ ಸ್ಥಾನಿಯಾಗಿದ್ದಾರೆ. ಪ್ರಶಸಿ ವಿಚೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಪ್ರೊ. ಕುರಿಯನ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಾಣಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News