×
Ad

ಭಟ್ಕಳ: ನಾಯಕತ್ವ ತರಬೇತಿ ಕಾರ್ಯಾಗಾರ

Update: 2017-08-19 23:35 IST

ಭಟ್ಕಳ, ಆ. 19: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬೈ ಎಮ್.ಆರ್.ಪೈ ಸಂಸ್ಥೆಯ ವತಿಯಿಂದ ಎರಡು ದಿನಗಳ ನಾಯಕತ್ವ ತರಬೇತಿ ಕಾರ್ಯಾಗಾರವು ಜರುಗಿತು.

ಅಧ್ಯಕ್ಷ  ಡಾ. ಸುರೇಶ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತವನ್ನು ಮುನ್ನಡೆಸುವಲ್ಲಿ ಯುವ ನಾಯಕತ್ವದ ಪಾತ್ರದ ಅಗತ್ಯತೆಯನ್ನು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಸಚಿನ ಕಾಮತ ಹಾಗೂ ಕ್ಲೆರಿಸ್ಸಾ ಜತನ್ನಾ ನಾಯಕತ್ವ ಕುರಿತಾದ ತರಬೇತಿ ನೀಡಿದರು. ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಶೈಕ್ಷಣಿಕ ಸಲಹೆಗಾರ ಬಿ.ಆರ್.ಕೆ ಮೂರ್ತಿ, ಪ್ರಾಂಶುಪಾಲ ನಾಗೇಶ ಭಟ್, ಉಪನ್ಯಾಸಕರಾದ ಫಣಿಯಪ್ಪಯ್ಯ ಹೆಬ್ಬಾರ, ವಿಘ್ನೇಶ ಪ್ರಭು, ನಾಗೇಶ ಪ್ರಭು, ವಿಶ್ವನಾಥ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News