ಭಾರತ ಮೂಲದ 12 ವರ್ಷದ ಬಾಲಕನಿಗೆ 'ಯುನೈಟೆಡ್ ಕಿಂಗ್ ಡಮ್ ನ ಬಾಲ ಮೇಧಾವಿ’ ಪಟ್ಟ

Update: 2017-08-20 12:44 GMT

ಲಂಡನ್, ಆ.20: ಪ್ರಸಿದ್ಧ ಟೆಲಿವಿಶನ್ ಕ್ವಿಝ್ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಭಾರತ ಮೂಲದ 12 ವರ್ಷದ ಬಾಲಕ ಯುನೈಟೆಡ್ ಕಿಂಗ್ ಡಮ್ ನ ‘ಬಾಲ ಮೇಧಾವಿ’ನಾಗಿ ಹೊರಹೊಮ್ಮಿದ್ದಾನೆ.

ಚಾನೆಲ್ 4ನ ‘ಚೈಲ್ಡ್ ಜೀನಿಯಸ್’ ಶೋನಲ್ಲಿ ತನ್ನ ಪ್ರತಿಸ್ಪರ್ಧಿ 9 ವರ್ಷದ ಬಾಲಕ ರೋನನ್ ನನ್ನು 10-4 ಅಂಕಗಳಿಂದ ಸೋಲಿಸಿದ ಭಾರತ ಮೂಲದ ರಾಹುಲ್ ದೋಶಿ ಯುನೈಟೆಡ್ ಕಿಂಗ್ ಡಮ್ ನ ‘ಬಾಲ ಮೇಧಾವಿ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಉತ್ತರ ಲಂಡನ್ ಶಾಲೆಯೊಂದರ ವಿದ್ಯಾರ್ಥಿಯಾಗಿರುವ ರಾಹುಲ್ ದೋಶಿ 19ನೆ ಶತಮಾನದ ಕಲಾವಿದರಾದ ವಿಲಿಯಂ ಹೋಲ್ಮನ್ ಹಂಟ್ ಹಾಗೂ ಜಾನ್ ಎವೆರೆಟ್ ಮಿಲ್ಲೈಸ್ ಬಗೆಗಿನ ಪ್ರಶ್ನೆಗೆ ಉತ್ತರಿಸಿ ಈ ಸಾಧನೆ ಮೆರೆದಿದ್ದಾನೆ.

‘ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ ರಾಹುಲ್ ನ ತಂದೆ ಮಿನೇಶ್. 

ಮೊದಲ ರೌಂಡ್ ಗಳಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಾಹುಲ್ ಎಲ್ಲರ ಗಮನೆಸೆಳೆದಿದ್ದ. ಈ ಸ್ಪರ್ಧೆಯಲ್ಲಿ ಮಕ್ಕಳು ಗಣಿತ, ಇಂಗ್ಲಿಷ್, ಸ್ಪೆಲ್ಲಿಂಗ್ ಹಾಗು ಇತಿಹಾಸ ಸಂಬಂಧಿತ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News