×
Ad

ಕೊಕ್ಕಡ: ಮನೆಗೆ ನುಗ್ಗಿ ನಗ-ನಗದು ಕಳವು

Update: 2017-08-20 20:44 IST

ಬೆಳ್ತಂಗಡಿ, ಆ. 20: ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಆಲಂಬಿಲ ಎಂಬಲ್ಲಿಯ ಗಂಗಮ್ಮ (70 ) ಎಂಬ ವಯೋವೃದ್ದೆಯೋರ್ವರ ಮನೆಗೆ ಹಾಡಹಗಲೇ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟಿನ ಬೀಗ ಮುರಿದು 10 ಸಾವಿರ ರೂ. ನಗದು, ಚಿನ್ನದ ಕರಿಮಣಿ, ಬೆಂಡೋಲೆಗಳನ್ನು ಕಳ್ಳತನ ಮಾಡಿದ ಘಟನೆ ರವಿವಾರ ಸಂಜೆ  ನಡೆದಿದೆ.

ಗಂಗಮ್ಮ ಏಕಾಂಗಿಯಾಗಿ ಈ ಮನೆಯಲ್ಲಿ ವಾಸಿಸುತ್ತಿದ್ದು, ಮಧ್ಯಾಹ್ನ ಊಟದ ಬಳಿಕ ಸಮೀಪವೇ ಇರುವ ತನ್ನ ಮಗಳ ಮನೆಗೆ ತೆರಳಿದ್ದರು. ಈ ಸಂದರ್ಭ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿ ತನ್ನ ಮಗಳು ತಂದಿರಿಸಿದ್ದ ಆಕೆಯ ಚಿನ್ನದ ಕರಿಮಣಿ ಮತ್ತು ಬೆಂಡೋಲೆ ಹಾಗೂ 10 ಸಾವಿರ ರೂ. ಕದ್ದೊಯ್ದಿದ್ದಾರೆ. 

ಧರ್ಮಸ್ಥಳ ಪೊಲೀಸ್ ಠಾಣೆಗೆ ಈ ಬಗ್ಗೆ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News