×
Ad

ಸುಸಂಸ್ಕೃತ ಶಿಕ್ಷಕನಿಂದ ವಿದ್ಯಾರ್ಥಿಗೆ ಉತ್ತಮ ಭವಿಷ್ಯ: ಅದಮಾರು ಶ್ರೀ

Update: 2017-08-20 21:30 IST

ಉಡುಪಿ, ಆ.20: ಪ್ರಸ್ತುತ ಸುಶಿಕ್ಷಿತ ಶಿಕ್ಷಕರ ಕೊರತೆ ಎದುರಾಗಿದ್ದು ಇದನ್ನು ನೀಗಿಸುವ ಕೆಲಸ ಆಗಬೇಕಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕೇವಲ ತಾಂತ್ರಿಕ, ವೈದ್ಯಕೀಯ ಕ್ಷೇತ್ರಗಳಿಗೆ ಮಾತ್ರ ಆದ್ಯತೆ ನೀಡದೆ ಬೋಧನಾ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡಬೇಕಾಗಿದೆ. ಸುಸಂಸ್ಕೃತ ಶಿಕ್ಷಕನಿಂದ ಮಾತ್ರ ವಿದ್ಯಾರ್ಥಿಗೆ ಉತ್ತಮ ಭವಿಷ್ಯ ನೀಡಲು ಸಾಧ್ಯ ಎಂದು ಅದಮಾರು ಮಠಾಧೀಶ ಶ್ರೀ ವಿ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ರವಿವಾರ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಲಾದ ಪೂರ್ಣ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಕ್ಕಳು ದಾರಿ ತಪ್ಪಿದಾಗ ಬುದ್ದಿ ಹೇಳುವ ಗುರುಗಳು ಅಗತ್ಯ. ಇದರಿಂದ ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದ ಅವರು, ಕಾಲೇಜಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಾಲ್ಕು ಮಹಡಿಯ ಕಟ್ಟಡ, ವಿಶಾಲ ಪ್ರಯೋಗಾಲಯ, ಆಧುನಿಕ ಶೈಲಿಯ ಗ್ರಂಥಾ ಲಯವನ್ನು ನಿರ್ಮಿಸುವ ಉದೆ್ದೀಶವನ್ನು ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್, ಕೆಎಂಎ್ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಪತ್ರಕರ್ತ ಯು.ಕೆ.ಕುಮಾರನಾಥ, ಶ್ರೀನಿವಾಸ ವಿವಿಯ ವೈಸ್ ಚಾನ್ಸೆಲರ್ ಪ್ರೊ.ಡಾ.ಪಿ. ಎಸ್.ಐತಾಳ್, ಪ್ರೈಮ್ ಇನ್ಸ್ಟ್‌ಟ್ಯೂಟ್ ಸ್ಥಾಪಕ ರತ್ನ ಕುಮಾರ್, ಲೇಖಕಿ ಡಾ.ವೀಣಾ ಬನ್ನಂಜೆ, ಸಿಎ ಗಣೇಶ್ ಬಿ.ಕಾಂಚನ್, ಎಂ.ನಾಗರಾಜ ಹೆಬ್ಬಾರ್ ಅವರಿಗೆ ದ ಪ್ರೈಡ್ಸ್ ಆ್ ಪಿಪಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು ಎರಡು ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್..ಚಂದ್ರಶೇಖರ, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಡಾ.ಬಿ.ಎಂ.ಸೋಮಯಾಜಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಾಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News