×
Ad

'ಟ್ಯಾಲೆಂಟ್' ವತಿಯಿಂದ ಮದ್ರಸ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ

Update: 2017-08-20 21:57 IST

ಮಂಗಳೂರು, ಆ. 21: ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ವತಿಯಿಂದ 30 ಮಂದಿ ಪ್ರತಿಭಾವಂತ ಮದ್ರಸ ವಿದ್ಯಾರ್ಥಿಗಳಿಗೆ ನೀಡಲ್ಪಡುವ ‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸ್ ಅವಾರ್ಡ್ 2017’ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ಸಭಾಂಗಣದ ಮರ್‌ಹೂಂ ಸುಲ್ತಾನ್ ಹಾಜಿ ವೇದಿಕೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಜಂ-ಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಮತ್ತು ಎಸ್‌ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಿದರು. ಎಸ್‌ಎಸ್‌ಎಫ್ ಕರ್ನಾಟಕದ ಕಾರ್ಯದರ್ಶಿ ಹಾಫಿಳ್ ಸುಫಿಯಾನ್ ಸಖಾಫಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಮಿಸ್ಬಾಹ್ ವಿಮೆನ್ಸ್ ಕಾಲೇಜು ಕೃಷ್ಣಾಪುರ ಇದರ ಅಧ್ಯಕ್ಷ ಬಿ.ಎಂ ಮುಮ್ತಾಝ್ ಅಲಿ ಕೃಷ್ಣಾಪುರ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯ,ಬ್ಯಾರೀಸ್ ಕಲ್ಚರಲ್ ಫೋರಮ್, ದುಬೈ ಇದರ ಉಪಾಧ್ಯಕ್ಷರು ಹಾಗೂ ಡಿಕೆಎಸ್‌ಸಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಮೂಳೂರು ಇದರ ಅಧ್ಯಕ್ಷ ಎಂ.ಇ ಮೂಳೂರು, ಮಂಗಳೂರು ಮಾರ್ಕೆಟಿಂಗ್‌ನ ಆಡಳಿತ ನಿರ್ದೇಶಕ ಬಿ.ಬಷೀರ್, ಬೈಕಂಪಾಡಿ ಡೆಕ್ಕನ್ ಪ್ಲಾಸ್ಟ್ ಇಂಡಸ್ಟ್ರಿಯ ನಿರ್ದೇಶಕ ಬಷೀರ್ ಹಾಜಿ, ಬ್ಯಾರೀಸ್ ಕಲ್ಚರಲ್ ಫೋರಮ್, ದುಬಾ   ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ‘ನಂಡೆ ಪೆಂಙಳ್’ನ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಸುಲ್ತಾನ್ ಬೀಡೀಸ್‌ನ ರಹೀಂ ಕೊಡಾಜೆ, ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಹಾಜಿ ಮೊದಿನ್ ಕುಂಞಿ ಮರಾಠಿಮೂಲೆ, ಉದ್ಯಮಿ ಮುಬೀನ್ ಕೃಷ್ಣಾಪುರ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ ಕೆ.ಎಚ್ ರಫೀಕ್ ಸೂರಿಂಜೆ, ಪುತ್ತಿಗೆ ಬಿಲ್ಡರ್ಸ್‌ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಫತೇ ಮುಹಮ್ಮದ್ ಪುತ್ತಿಗೆ, ವಿಶ್ವಾಸ್ ಎಸ್ಟೇಟ್ಸ್ ನ ಸುಲೈಮಾನ್ ಶೇಖ್ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಟ್ಯಾಲೆಂಟ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಆರು ತಿಂಗಳಲ್ಲೇ ಕುರ್‌ಆನ್ ಕಂಠಪಾಠ ಮಾಡಿದ ಕೆ.ಐ.ಸಿ ಕುಂಬ್ರದ ವಿದ್ಯಾರ್ಥಿ ಮುಹಮ್ಮದ್ ತ್ವಾಹಾ ಸಾಲಿಮ್ ಅವರಿಗೆ ಸಯ್ಯದ್ ಅಬ್ದುಲ್ ಖಾದರ್ ಬಾಷು ಸ್ಮಾರಕ ‘ಟ್ಯಾಲೆಂಟ್ ಹಾಫಿಝ್-ಎ-ಕುರ್‌ಆನ್ ಅವಾರ್ಡ್ 2017’ ಪ್ರಶಸ್ತಿ, ಅಮೇರಿಕಾದಲ್ಲಿ ನಡೆದ ವೈಜ್ಞಾನಿಕ ಸಂಶೋಧನೆ ಪ್ರದರ್ಶನದಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿ ಮುಹಮ್ಮದ್ ಶರೀಫ್ ಮಂಗಳೂರು ಇವರಿಗೆ ಹಾಜಿ ಯು. ಅಹ್ಮದ್ ಗುಲಾಂ ಸ್ಮಾರಕ ‘ಟ್ಯಾಲೆಂಟ್ ಯಂಗ್ ಇನ್ನೋವೇಟರ್ ಅವಾರ್ಡ್ 2017’ ಪ್ರಶಸ್ತಿ, ಸ್ಕೇಟಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾ ಪ್ರತಿಭೆ ಮುಹಮ್ಮದ್ ಶಾಮಿಲ್ ಅರ್ಶದ್ ಮಂಗಳೂರು ಇವರಿಗೆ ಬಾವಾ ಹಾಜಿ ಅರಳ ಸ್ಮಾರಕ ‘ಟ್ಯಾಲೆಂಟ್ ಸ್ಪೋರ್ಟ್ಸ್ ಅವಾರ್ಡ್ 2017’ ಪ್ರಶಸ್ತಿ, ಚಿತ್ರಕಲೆಯಲ್ಲಿ ವಿಶೇಷ ಸಾಧನೆಗೈದ ಅಪೂರ್ವ ಕಲಾವಿದೆ ರಈಸ ಉಡುಪಿ ಇವರಿಗೆ ‘ರಮ್ಲಾನ್ ಹಾಜಿ ಸ್ಮಾರಕ ಯಂಗ್ ಆರ್ಟಿಸ್ಟ್ ಅವಾರ್ಡ್ 2017’ ಪ್ರಶಸ್ತಿ ಹಾಗೂ ಟೇಕ್ವಾಂಡೊ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪ್ರತಿಭೆ ವಿಲಾಯತ್ ರಾಫಿ ಗೂಡಿನಬಳಿ ಇವರಿಗೆ ‘ಟ್ಯಾಲೆಂಟ್ ಸ್ಪೋರ್ಟ್ಸ್ ಅವಾರ್ಡ್ 2017’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಸಲಹೆಗಾರ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ ಪ್ರಸ್ತಾವನೆಗೈದರು. ಸದಸ್ಯ ಜಸೀಂ ಸಜಿಪ ಪ್ರಶಸ್ತಿ ಜೇತರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ವಂದಿಸಿದರು. ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಸಂಘಟನೆಯಲ್ಲಿ ಸಂಸ್ಥೆಯ ಮಜೀದ್ ತುಂಬೆ, ಮುಹಮ್ಮದ್ ಯು.ಬಿ, ಅಸ್ಪರ್ ಹುಸೈನ್, ನಕಾಶ್ ಬಾಂಬಿಲ, ಬಡಿಲ ಹುಸೈನ್ ಮೊದಲಾದವರು ಸಹಕರಿಸಿದ್ದರು.

ಕಾರ್ಯಕ್ರಮದಲ್ಲಿ ಮದ್ರಸ ಬೋರ್ಡ್ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯಲ್ಲೇ ಅತ್ಯಧಿಕ ಅಂಕ ಪಡೆದ 5ನೆ ತರಗತಿಯ 10 ವಿದ್ಯಾರ್ಥಿಗಳಿಗೆ, 7ನೆ ತರಗತಿಯ 10 ವಿದ್ಯಾರ್ಥಿಗಳಿಗೆ, 10ನೆ ತರಗತಿಯ 7 ವಿದ್ಯಾರ್ಥಿಗಳಿಗೆ ಮತ್ತು 12ನೆ ತರಗತಿಯ 3 ವಿದ್ಯಾರ್ಥಿಗಳಿಗೆ ಹೀಗೆ ಒಟ್ಟು 30 ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News