ಅಮೆರಿಕದ ಯುದ್ಧನೌಕೆಯ ಅವಶೇಷಗಳು 72 ವರ್ಷ ಬಳಿಕ ಪತ್ತೆ

Update: 2017-08-20 17:07 GMT

ವಾಶಿಂಗ್ಟನ್, ಆ. 20: ಅಮೆರಿಕದ ಎರಡನೆ ಮಹಾಯುದ್ಧ ಕಾಲದ ಯುದ್ಧ ನೌಕೆ ‘ಯುಎಸ್‌ಎಸ್ ಇಂಡಿಯಾನಪೊಲಿಸ್’ನ ಅವಶೇಷಗಳನ್ನು ಪತ್ತೆಹಚ್ಚಿರುವುದಾಗಿ ಸಂಶೋಧಕರು ಶನಿವಾರ ಘೋಷಿಸಿದ್ದಾರೆ.

ಈ ಯುದ್ಧ ನೌಕೆಯನ್ನು 72 ವರ್ಷಗಳ ಹಿಂದೆ ಜಪಾನ್‌ನ ಸಬ್‌ಮರೀನೊಂದು ಮುಳುಗಿಸಿತ್ತು.

ಅವಶೇಷಗಳು ಫಿಲಿಪ್ಪೀನ್ಸ್ ಸಮುದ್ರದಲ್ಲಿ 5.5 ಕಿ.ಮೀ. ಆಳದಲ್ಲಿ ಪತ್ತೆಯಾಗಿವೆ ಎಂದು ಶೋಧ ತಂಡದ ಮುಖ್ಯಸ್ಥ ಪೌಲ್ ಅಲನ್ ತಿಳಿಸಿದರು.

ಹಿರೋಶಿಮದಲ್ಲಿ ಬಳಸಲಾದ ಪರಮಾಣು ಬಾಂಬ್‌ನ ಭಾಗಗಳನ್ನು ತಲುಪಿಸುವ ರಹಸ್ಯ ಕಾರ್ಯಾಚರಣೆಯನ್ನು ಮುಗಿಸಿದ ಬಳಿಕ, ಎರಡನೆ ಮಹಾಯುದ್ಧದ ಕೊನೆಯ ದಿನಗಳಲ್ಲಿ ನೌಕೆ ಮುಳುಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News