ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹತ್ಯೆ ಯತ್ನ ಪ್ರಕರಣ: 10 ಮಂದಿಗೆ ಗಲ್ಲು

Update: 2017-08-20 17:10 GMT

ಢಾಕಾ, ಆ. 20: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರನ್ನು 2000ದಲ್ಲಿ ಹತ್ಯೆಗೈಯಲು ಪ್ರಯತ್ನಿಸಿದ ಪ್ರಕರಣದಲ್ಲಿ ದೇಶದ ನ್ಯಾಯಾಲಯವೊಂದು ರವಿವಾರ 10 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದೆ ಹಾಗೂ ಒಂಭತ್ತು ಮಂದಿಗೆ ತಲಾ 20 ವರ್ಷಗಳ ಜೈಲು ವಾಸ ವಿಧಿಸಿದೆ.

2000ದಲ್ಲಿ ಹಸೀನಾ ತನ್ನ ತವರು ಗ್ರಾಮ ಗೋಪಾಲ್‌ಗಂಜ್‌ನ ಮೈದಾನವೊಂದರಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಬೇಕಾಗಿತ್ತು. ಆ ಮೈದಾನದಲ್ಲಿ ಶಕ್ತಿಶಾಲಿ ಬಾಂಬೊಂದನ್ನು ಇಟ್ಟು ಪ್ರಧಾನಿಯನ್ನು ಕೊಲ್ಲಲು ಸಂಚು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಆದರೆ, ಸಭೆಗೆ ಮುಂಚಿತವಾಗಿಯೇ ಭದ್ರತಾ ಸಿಬ್ಬಂದಿ ಆ ಬಾಂಬನ್ನು ಪತ್ತೆಹಚ್ಚಿದ್ದರು.

ವಿಶೇಷಾಧಿಕಾರಗಳ ಕಾಯ್ದೆಯಡಿ 25 ಆರೋಪಿಗಳನ್ನು ಬಂಧಿಸಲಾಗಿತ್ತು. ಒಂಬತ್ತು ಮಂದಿಗೆ ತಲಾ 20 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ ತಲಾ 20,000 ಟಾಕಾ (ಸುಮಾರು 15,795 ರೂಪಾಯಿ) ದಂಡ ವಿಧಿಸಲಾಗಿದೆ. ನಾಲ್ವರನ್ನು ದೋಷಮುಕ್ತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News