ಭಾರತೀಯ ವಿಶೇಷ ಪಡೆಗೆ ಹವಾನಿಯಂತ್ರಿತ ಜಾಕೆಟ್: ಮನೋಹರ್ ಪಾರಿಕ್ಕರ್
Update: 2017-08-20 22:42 IST
ಪಣಜಿ, ಆ. 20: ಭಾರತೀಯ ವಿಶೇಷ ಪಡೆಯ ಯೋಧರಿಗೆ ಹವಾನಿಯಂತ್ರಿತ ಜಾಕೆಟ್‌ಗಳನ್ನು ಪರಿಚಯಿಸಲು ಪರೀಕ್ಷೆ ನಡೆಯುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ತಿಳಿಸಿದ್ದಾರೆ.
ವಿಶೇಷ ಪಡೆ ಕಾರ್ಯಾಚರಣೆಯಲ್ಲಿ ವ್ಯಾಪಕ ವ್ಯಾಯಾಮ ಇರುತ್ತದೆ. ದೇಹದ ಬಿಸಿ ಏರುವುದರಿಂದ ಅನಾನುಕೂಲವಾಗುತ್ತದೆ. ಈ ಸಂದರ್ಭ ಹವಾ ನಿಯಂತ್ರಣ ಜಾಕೆಟ್ ಧರಿಸಿದ್ದರೆ ಅನುಕೂಲವಾಗುತ್ತದೆ. ಈ ಬಗ್ಗೆ ಪರೀಕ್ಷೆ ನಡೆಯುತ್ತಿದೆ ಎಂದು ಪಾರಿಕ್ಕರ್ ಹೇಳಿದರು.
ಲಘು ಯುದ್ಧ ವಿಮಾನ ತೇಜಸ್ ಬಗ್ಗೆ ಮಾತನಾಡಿದ ಅವರು, ಲಘುವಾಗಿರುವುದು ಹಾಗೂ 3.5 ಟನ್ ಪ್ಲೇಲೋಡ್ ಅನ್ನು ಮಾತ್ರ ಹೊತ್ತೊಯ್ಯವ ಸಾಮರ್ಥ್ಯ ಹೊಂದಿರುವುದು ತೇಜಸ್‌ನ ದುರ್ಬಲ ಅಂಶ ಎಂದರು.
ಆದರೆ, ತೇಜಸ್‌ಗೆ ಇತರ ಕೆಲವು ಸಾಮರ್ಥ್ಯಗಳಿವೆ. ಜಗತ್ತಿನ ಅತೀ ಉತ್ತಮ ವಿಮಾನಗಳಿಗಿಂತ ತೇಜಸ್ ಉತ್ತಮವಾಗಿ ಹಾರಾಟ ನಡೆಸುತ್ತದೆ ಎಂದು ಅವರು ಹೇಳಿದರು.