ಮೂಡುಬಿದಿರೆಯಲ್ಲಿ ಕೃಷಿ ವಿಚಾರ ಸಂಕಿರಣ

Update: 2017-08-20 17:21 GMT

ಮೂಡುಬಿದಿರೆ, ಆ. 20: ಶ್ರೀ ಕ್ಷೇತ್ರ ಧ.ಗ್ರಾ.ಯೋ  ಕಾರ್ಕಳ ತಾಲೂಕು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮೂಡುಬಿದಿರೆ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆ ವಲಯ ಮಟ್ಟದ ಕೃಷಿ ವಿಚಾರ ಸಂಕಿರಣವು ಭಾನುವಾರ ಶ್ರೀ ಮಹಾವೀರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಿಚಾರಗೋಷ್ಠಿಯಲ್ಲಿ ರಾಷ್ಟ್ರೀಯ ಸಾಧನಾಶೀಲ ಕೃಷಿ ಪ್ರಶಸ್ತಿ ವಿಜೇತ ಉಡುಪಿಯ ಕುದಿ ಶ್ರೀನಿವಾಸ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಶ್ರೀ ಮಹಾವೀರ ಪಿ.ಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ರಮೇಶ್ ಭಟ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು. ಮೂಡುಬಿದಿರೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಸುಕುಮಾರ್ ಹೆಗ್ಡೆ ಅವರು ಸಮಗ್ರ ಕೃಷಿ ದ್ಧತಿಯ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕ ಶ್ರೀಪತಿ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕಿನ ಯೋಜನಾಧಿಕಾರಿ ಕೃಷ್ಣ ಟಿ, ಕೃಷಿ ಅಧಿಕಾರಿ ಬಶೀರ್ ಸುರತ್ಕಲ್, ಮೂಡುಬಿದಿರೆ ಕೃಷಿ ಇಲಾಖೆಯ ಅಧಿಕಾರಿ ವಿ.ಎಸ್.ಕುಲಕರ್ಣಿ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಜೊಸ್ಸಿ ಮಿನೇಜಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಜನೆಯ ಕಾರ್ಕಳ ಕೇಂದ್ರ ಸಮಿತಿ ಸದಸ್ಯ ಸತೀಶ್ ಕೋಟ್ಯಾನ್, ಪ್ರ-ಸ್ವಸಹಾಯ ಸಂಘಗಳ ಮೂಡುಬಿದಿರೆ ಒಕ್ಕೂಟದ ವಲಯಾಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ಯೋಜನೆಯ ಮೂಡುಬಿದಿರೆ ವಲಯದ ಮೇಲ್ವೀಚಾರಕಿ ಗೀತಾ ಸ್ವಾಗತಿಸಿದರು. ಕೃಷಿ ಅಧಿಕಾರಿ ಶಶಿಕಿರಣ್ ಕಾರ್ಯಕ್ರಮ ನಿರೂಪಿಸಿದರು. ಕಲ್ಲಬೆಟ್ಟು ಸ್ವಸಹಾಯ ಸಂಘ ಸದಸ್ಯೆ ಲೀಲಾವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News