ಅಡ್ಡೂರು: ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Update: 2017-08-20 17:54 GMT

ಅಡ್ಡೂರು, ಆ.20: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ  ಪಾದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ನಡೆಯಿತು. 

ಈ ವೇಳೆ ಸಂಘದ ನೂತನ ಅಧ್ಯಕ್ಷರಾಗಿ ಗುರುಪುರ ಗ್ರಾಪಂ ಸದಸ್ಯ ಎ.ಕೆ ರಿಯಾಝ್ ಆಯ್ಕೆಯಾದರೆ, ಉಪಾಧ್ಯಕ್ಷ ರಾಗಿ ಜಬ್ಬಾರ್ ಕೆಳಗಿನಕೆರೆ, ಗುರುಪುರ ಗ್ರಾಪಂ ಸದಸ್ಯ ಅಬ್ದುಲ್ ಜಲೀಲ್, ಪ್ರಧಾನ ಕಾರ್ಯದರ್ಶಿಯಾಗಿ 'ಅಕ್ಷರಕ್ರಾಂತಿ ಸಾಹಿತ್ಯ ಒಕ್ಕೂಟ'ದ ಸದಸ್ಯ ಶಾಹೀದ್, ಜೊತೆ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಬೊಟ್ಟಿಗೆರೆ, ಹಂಝ ಕೆಳಗಿನಕೆರೆ, ಕೋಶಾಧಿಕಾರಿಯಾಗಿ ಹನೀಫ್ ಸಾಗರ್ ಆಯ್ಕೆಯಾದರು. ಹಾಗೂ 10 ಮಂದಿ ಸದಸ್ಯರುಳ್ಳ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಸಭೆಯಲ್ಲಿ ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಶಾಲಾ ಹಿತರಕ್ಷಣ ಸಮಿತಿಯ ಅಧ್ಯಕ್ಷ ಡಾ.ಇ.ಕೆ.ಸಿದ್ದೀಕ್, ಫೈವ್ ಸ್ಟಾರ್ ಕ್ಲಬ್ ನ ಹಬೀಬ್, ಶಾಲಾ ಹಿತ ರಕ್ಷಣ ಸಮಿತಿಯ ಉಪಾಧ್ಯಕ್ಷ ಅಹ್ಮದ್ ಬಾವಾ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News