ಸಂವಿಧಾನಾತ್ಮಕವಾಗಿ ಗುಂಪು ಹಿಂಸೆಯನ್ನು ತಡೆಯಲು ಜನರು ಮುಂದೆ ಬರಬೇಕು: ಶಾಫಿ ಬೆಳ್ಳಾರೆ

Update: 2017-08-21 15:44 GMT

ಫರಂಗಿಪೇಟೆ, ಆ. 21: ಎಸ್.ಡಿ.ಪಿ.ಐ. ರಾಷ್ಟ್ರದಾದ್ಯಂತ ಹಮ್ಮಿಕೊಂಡ ಗುಂಪು ಹಿಂಸಾ ಹತ್ಯೆಯ ವಿರುದ್ಧ ಅಭಿಯಾನವು ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಫರಂಗಿಪೇಟೆಯಲ್ಲಿ ನಡೆಯಿತು. 

ಈ ಸಂದರ್ಭ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ದೇಶದಲ್ಲಿ ಗುಂಪು ಹಿಂಸೆ ಮಾಡುವ ಕೈಗಳನ್ನು ಸಂವಿಧಾನಾತ್ಮಕವಾಗಿ ತಡೆಯಲು ಜನರು ಮುಂದೆ ಬರಬೇಕಾಗಿದೆ, ಅದಕ್ಕೆ ಸಂವಿದಾನದಲ್ಲಿ ಅವಕಾಶವೂ ಇದೆ, ಈಗಾಗಲೆ ಕಳೆದ ಮೂರು ವರ್ಷಗಳಲ್ಲಿ ಗುಂಪು ಹಿಂಸೆಗೆ 39 ಜೀವಗಳು ಬಲಿಯಾಗಿವೆ, ಇದು ಸಾಮಾನ್ಯವಾಗುವುದಕ್ಕೆ ಮುಂಚೆ ಜನರು ಎಚ್ಚೆತ್ತು ಕೊಳ್ಳಬೇಕಾಗಿದೆ. ಇಂದಿನ ಸನ್ನಿವೇಶದಲ್ಲಿ ಮನುಷ್ಯ ವಿರೋಧಿ ಸಿದ್ಧಾಂತವನ್ನು ಒಪ್ಪುವಂತೆ ಅಮಾಯಕರ ಮೇಲೆ ಬಲವಂತಪಡಿಸುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಇದರ ವಿರುದ್ಧ ದ್ವನಿ ಎತ್ತಿದವರನ್ನು ಆಡಳಿತಾತ್ಮಕ ಅಧಿಕಾರವನ್ನು ಬಳಸಿ ದಮನಿಸಲ್ಪಡುವ ವ್ಯವಸ್ಥಿತ ಶಡ್ಯಂತ್ರ ನಡೆಯುತ್ತಿದೆ ಎಂದು  ತಿಳಿಸಿದರು.

ಎಸ್.ಡಿ.ಪಿಐ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್, ಆಲ್ ಇಂಡಿಯಾ ಇಮಾನ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಜಾಫರ್ ಸ್ವಾದಿಖ್ ಪೈಝಿ, ದಲಿತ ಸಂಫರ್ಷ ಸಮಿತಿ ಪುತ್ತೂರು ಸಂಚಾಲಕರಾದ ಆನಂದ್ ಮಿತ್ತಬೈಲ್, ಬಂಟ್ವಾಳ ಪುರಸಬೆ ಸದಸ್ಯ ಇಕ್ಬಾಲ್ ಐ.ಎಮ್.ಆರ್, ಪಿ.ಎಫ್.ಐ. ಬಂಟ್ವಾಳ ಜಿಲ್ಲೆ ಅಧ್ಯಕ್ಷ ಇಜಾಝ್ ಅಹ್ಮದ್ ಈ ಸಂದರ್ಭದಲ್ಲಿ ಮಾತನಾಡಿದರು

ಎಸ್.ಡಿ.ಪಿ.ಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್, ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಆಲಿ, ಎಸ್.ಡಿ.ಟಿ.ಯು ಬಂಟ್ವಾಳ ತಾಲೂಕು ಸಂಚಾಲಕ ಯೂಸುಫ್ ಆಲಡ್ಕ, ಎಸ್ ಡಿ.ಪಿ.ಐ ಪುದು ವಲಯಾಧ್ಯಕ್ಷ ಸುಲೈಮಾನ್, ಉದ್ಯಮಿ ಸಿದ್ದೀಕ್ ಎಮ್.ಎಸ್. ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹಮದ್ ಉಪಸ್ಥಿತರಿದ್ದರು, ಇಸ್ಮಾಯಿಲ್ ಬಾವಾ ಸ್ವಾಗತಿಸಿ, ಮುಹಮ್ಮದ್ ರಿಯಾಝ್ ಕಡಂಬು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News