×
Ad

ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2017-08-21 21:54 IST

ಕಾಪು, ಆ.21: ಪತ್ನಿಯ ಅನಾರೋಗ್ಯದಿಂದ ಮನನೊಂದ ಕಟಪಾಡಿ ಪಳ್ಳಿಗುಡ್ಡೆಯ ರಘು ಕೋಟ್ಯಾನ್ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ಕುರ್ಕಾಲು ಗ್ರಾಮದ ಶಂಕರಪುರ ನಿವಾಸಿ ಚಂದ್ರಶೇಖರ ದೇವಾಡಿಗ(52) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಶಂಕರಪುರ ಓಂ ಸಾಯಿ ಬಸ್ ನಿಲ್ದಾಣದ ಬಳಿಯ ಆವರಣ ಇಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಗುಂಡ್ಮಿ ಗ್ರಾಮದ ಬಸವನಬೆಟ್ಟು ನಿವಾಸಿ ರಾಮಚಂದ್ರ(46) ಎಂಬವರು  ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News