ಡೋಕಾ ಲ ಬಿಕ್ಕಟ್ಟು ಉಲ್ಬಣ: ಚೀನಾದಲ್ಲಿ ಸೇನಾಭ್ಯಾಸ

Update: 2017-08-21 16:27 GMT

ಬೀಜಿಂಗ್, ಆ. 21: ಡೋಕಾ ಲದಲ್ಲಿ ಭಾರತದೊಂದಿಗಿನ ಗಡಿ ವಿವಾದ ಉಲ್ಬಣಗೊಳ್ಳುತ್ತಿರುವಂತೆಯೇ, ಚೀನಾ ದೇಶದ ಪಶ್ಚಿಮ ಭಾಗದಲ್ಲಿ ಸೇನಾಭ್ಯಾಸ ನಡೆಸಿದೆ. ‘ಭಾರತದಲ್ಲಿ ಮಿಂಚು ಹರಿಸಲು’ ಈ ಸೇನಾಭ್ಯಾಸವನ್ನು ನಡೆಸಲಾಗಿದೆ ಎಂದು ಚೀನಾದ ಸೇನಾ ಪರಿಣತರೊಬ್ಬರು ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ವಿಮಾನ ಮತ್ತು ಸಶಸ್ತ್ರ ಪಡೆಗಳು ಸೇರಿದಂತೆ ಪೀಪಲ್ಸ್ ಲಿಬರೇಶನ್ ಆರ್ಮಿಯ 10 ತುಕಡಿಗಳು ಸೇನಾಭ್ಯಾಸದಲ್ಲಿ ಭಾಗವಹಿಸಿವೆ ಎಂದು ಚೀನಾ ಸೆಂಟ್ರಲ್ ಟೆಲಿವಿಶನ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News