×
Ad

ಬ್ಯಾಗ್ ಎರಗಿಸಿ ಪರಾರಿ: ಇಬ್ಬರ ಬಂಧನ

Update: 2017-08-21 22:34 IST

ಉಡುಪಿ, ಆ.21: ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಭಕ್ತರೊಬ್ಬರ ಬ್ಯಾಗ್ ಎರಗಿಸಿ ಪರಾರಿಯಾದ ಇಬ್ಬರು ಯುವಕರನ್ನು ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಆ. 20ರಂದು ರಾತ್ರಿ ನಡೆದಿದೆ.

ಬಂಧಿತರನ್ನು ಉಪ್ಪೂರಿನ ಶಕಿಲೇಶ್(18) ಹಾಗೂ ಮನೋಹರ್(19) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಜಮುನಾ(48) ಎಂಬವರು ತನ್ನ ಕುಟುಂಬದೊಂದಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು ದೇವರ ದರ್ಶನ ಪಡೆದು ಸಂಜೆ 5:30ರ ಸುಮಾರಿಗೆ ಬಸ್ ನಿಲ್ದಾಣದ ಕಡೆ ನಡೆದುಕೊಂಡು ಬರುತ್ತಿ ದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಜಮುನಾರ ಕೈ ಯಲ್ಲಿದ್ದ ಬ್ಯಾಗನ್ನು ಕಸಿದು ಪರಾರಿಯಾಗಿದ್ದರು.

ಇದನ್ನು ನೋಡಿದ ಸ್ಥಳೀಯ ರಿಕ್ಷಾ ಚಾಲಕ ಕೂಡಲೇ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಪುತ್ತೂರು ಎಲ್‌ವಿಟಿ ದೇವಸ್ಥಾನದ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬ್ಯಾಗ್‌ನಲ್ಲಿ ಮೊಬೈಲ್ ಹಾಗೂ ನಗದು ಮೂರು ಸಾವಿರ ರೂ.ಹಣ ಇತ್ತೆನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News