ಮೂಡುಬಿದಿರೆ ಠಾಣಾ ಎಎಸ್‌ಐ ನಿಧನ
Update: 2017-08-21 22:48 IST
ಮೂಡುಬಿದಿರೆ, ಆ. 21: ಇಲ್ಲಿನ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಕೃಷ್ಣ (46) ಅವರು ಅನಾರೋಗ್ಯಕ್ಕೊಳಗಾಗಿ ನಿಧನರಾಗಿದ್ದಾರೆ.
ಸೋಮವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಠಾಣೆಯಲ್ಲಿದ್ದ ಅವರಿಗೆ ತೀವ್ರತರದ ಚಳಿ ಜ್ವರ ಕಾಡಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಅಲ್ಲಿ ಚಿಕಿತ್ಸೆ ಪಡೆದು ನಂತರ ಅವರು ತಮ್ಮ ಪುತ್ತಿಗೆ ಪದವಿನಲ್ಲಿರುವ ಮನೆಗೆ ತೆರಳಿದ್ದು, ಸಂಜೆ ತೀವ್ರ ಅನಾರೋಗ್ಯದಿಂದ ನಿಧನರಾದರು.
1993ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಅವರು ಬಂದರು, ಬರ್ಕೆ, ಬೆಳ್ತಂಗಡಿ, ಪಾಂಡೇಶ್ವರ ಹಾಗೂ ಮೂಡುಬಿದಿರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪೊಲೀಸ್ ಇಲಾಖೆಗೆ ಸೇರುವ ಮೊದಲು ಅವರು ಕೆಲ ದಿನಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದರು.
ಸಾಮಾಜಿಕ ಕಾಳಜಿಯ ವ್ಯಕ್ತಿತ್ವವನ್ನು ಹೊಂದಿದ್ದ ಕೃಷ್ಣ ಅವರು ಪೊಲೀಸ್ ಇಲಾಖೆಗೆ ಸೇರಿದ ಬಳಿಕವು ಕೆಲವು ವರ್ಷ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅವರು ಪತ್ನಿ ಹಾಗು ಇಬ್ಬರು ಪುತ್ರರನ್ನು ಅಗಲಿದ್ದಾರೆ.