ಮೂಡುಬಿದಿರೆ: 'ಎಮರ್ಜ್-2017’ ಉದ್ಘಾಟನಾ ಸಮಾರಂಭ

Update: 2017-08-21 17:30 GMT

ಮೂಡುಬಿದಿರೆ, ಆ. 21: ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ 'ಎಮರ್ಜ್-2017’ ಇದರ ಉದ್ಘಾಟನಾ ಸಮಾರಂಭವು ಜರುಗಿತು.

ಮಂಗಳೂರಿನ ಸನ್‌ಸ್ಟಾರ್ ಸೋಲಾರ್ ಸೊಲ್ಯೂಷನ್ಸ್‌ನ ರುಡಾಲ್ಫ್ ಮಿನೇಜಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸೌರಶಕ್ತಿಯ ಅನುಕೂಲತೆ ಮತ್ತು ಅನನುಕೂಲತೆಗಳು, ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯ ಬಗ್ಗೆ ಹಾಗೂ ಸೌರಶಕ್ತಿಯ ವ್ಯಾಪ್ತಿಯ ಬಗ್ಗೆ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಆರ್.ಜಿ.ಡಿ’ಸೋಜಾ ಅಧ್ಯಕ್ಷತೆ ವಹಿಸಿ, ಸೌರಶಕ್ತಿಯ ಪ್ರಾಮುಖ್ಯತೆ ಹಾಗೂ ಸೌರಶಕ್ತಿಯ ಬಳಕೆಯ ಅಗತ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
ಸಹಪ್ರಾಧ್ಯಾಪಕ ಪ್ರವೀಣ್ ಜಿ.ಬಿ.ಕಾರ್ಯಕ್ರಮದ ಸಂಯೋಜಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News