ಅಸ್ಸಾಂ ನೆರೆ: ಸಾವಿನ ಸಂಖ್ಯೆ 154ಕ್ಕೇರಿಕೆ, 14 ಲಕ್ಷ ಸಂತ್ರಸ್ತರು

Update: 2017-08-21 17:34 GMT

ಗುವಾಹತಿ, ಆ. 21: ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ, ಸಂತ್ರಸ್ತರ ಸಂಖ್ಯೆ ಏರುತ್ತಿದೆ.

 ಪ್ರವಾಹಕ್ಕೆ ಸಿಲುಕಿ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಇಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ನೆರೆಯಿಂದ ಮೃತಪಟ್ಟವರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ.

ರಾಜ್ಯದ 33 ಜಿಲ್ಲೆಗಳಲ್ಲಿ 15 ಜಿಲ್ಲೆಗಳು ನೆರೆ ಬಾಧಿತವಾಗಿದೆ. 2227 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಅಸ್ಸಾಂನ ವಿಕೋಪ ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ.

1,241 ಗ್ರಾಮಗಳು ಮುಳುಗಡೆಯಾಗಿ 14.36 ಲಕ್ಷ ಜನರು ಸಂತ್ರಸ್ತರಾಗಿದ್ದರು. ಇದರಲ್ಲಿ 4.29 ಲಕ್ಷ ಜನರು ತಮ್ಮ ನಿವಾಸಕ್ಕೆ ಹಿಂದಿರುಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತೀವ್ರ ನೆರೆ ಪೀಡಿತ ಜಿಲ್ಲೆಯಾದ ಮೊರಿಗಾಂವ್‌ನಲ್ಲಿ 4.22 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಬಾರ್ಪೇಟಾ ಹಾಗೂ ದಕ್ಷಿಣ ಸಾಲ್ಮರಾ ಜಿಲ್ಲೆಗಳು ಇದನ್ನು ಅನುಸರಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News