×
Ad

ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ

Update: 2017-08-21 23:15 IST

ಮಂಗಳೂರು, ಆ.21: ಬೆಂಗಳೂರಿನ ಸಮರ್ಥ ಪ್ರಕಾಶನದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರ ದೇಶಭಕ್ತಿಗೇತೆಗಳ ಕವನ ಸಂಕಲನ ‘ಮುಕುಟಮಣಿ’ ಬಿಡುಗಡೆಗೊಂಡಿತು. ಈ ಸಂದರ್ಭ ಅಮೃತ ಪ್ರಕಾಶನದ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಹಾಗೂ ಚುಟುಕು ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾಧ್ಯಕ್ಷ ಕಾಸರಗೋಡು ಅಶೋಕ್ ಕುಮಾರ್ ಅವರಿಗೆ ಕೆಂಗಲ್ ಹನುಂತಯ್ಯ ರಾಜ್ಯ ಪ್ರಶಸ್ತಿ ಪ್ರದಾನಿಸಲಾಯಿತು.

ಈ ಸಂದರ್ಭ ಡಾ.ದೊಡ್ಡರಂಗೇಗೌಡ, ಡಾ.ಬಾಬು ಕೃಷ್ಣಮೂರ್ತಿ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್, ಡಾ.ವಸಂತ ಕುಮಾರ್ ಪೆರ್ಲ, ಡಾ.ವೊಡೇಪಿ ಕೃಷ್ಣ, ಹರಿಹರಪ್ರಿಯ, ರಾ.ವಿಜಯ ಸಮರ್ಥ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News